

ಮೈಸೂರು: ಂುುವ ಸಮೂಹ ಹೊಸ ಬಗೆಯ ವ್ಯವಹಾರ ಮತ್ತು ಸ್ಟಾರ್ಟಪ್ ಕಂಪನಿಗಳನ್ನು ಆರಂಭಿಸಲು ಸರ್ಕಾರ ಒದಗಿಸುತ್ತಿರುವ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ರಾಜ್ಯ ನಿರ್ದೇಶಕ ಡಾ.ಸಂಜಯ್ ತ್ಯಾಗಿ ಸಲಹೆ ನೀಡಿದರು.
ನಗರದ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದಿಂದ ಆಯೋಜಿಸಿರುವ ಎರಡು ದಿನಗಳ ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ‘ಹ್ಯಾಕ್‌ಎಲೈಟ್‘ಗೆ ಎಸ್‌ಜೆಸಿಇ ಕಾಲೇಜು ಆವರಣದಲ್ಲಿ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತ ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಸೇವೆಗಳನ್ನು ಒದಗಿಸುವಲ್ಲಿ ಮುಂಚೂಣಿಂುಲ್ಲಿದೆ. ಇದರ ಜತೆಗೆ ಉತ್ಪನ್ನ ಆಧಾರಿತ ರಾಷ್ಟ್ರವನ್ನಾಗಿ ಬದಲಾಯಿಸಲು ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದರು.
ಯುವ ಉದ್ಯಮಿಗಳು ಸ್ಟಾರ್ಟಪ್‌ಗಳನ್ನು ಅಧ್ಯಂುನ ವಾಡಿ, ತಂತ್ರಜ್ಞಾನ ಆಧಾರಿತ ಪರಿಸರವನ್ನು ನಿರ್ಮಿಸಲು ಸಹಕರಿಸಬೇಕು. ಭಾರತದ ಭವಿಷ್ಯ ರೂಪಿಸಲು ಮೂಲಸೌಕಂರ್ುವು ನಿರ್ಣಾಂುಕ ಪಾತ್ರ ವಹಿಸುವುದರಿಂದ ಹ್ಯಾಕಥಾನ್‌ಗಳು ನಾವೀನ್ಯತೆಯನ್ನು ಉತ್ತೇಜಿಸಿ ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಲು ಸಹಾಂು ವಾಡುತ್ತದೆ ಎಂದರು.
ಂುುವ ಸಮೂಹ ಹೊಸ ಬಗೆಯ ವ್ಯವಹಾರ ಮತ್ತು ಸ್ಟಾರ್ಟಪ್ ಕಂಪನಿಗಳನ್ನು ಆರಂಭಿಸಲು ಸರ್ಕಾರ ಒದಗಿಸುತ್ತಿರುವ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಈ ಕ್ಷೇತ್ರದಲ್ಲಿ ಭಾರಿ ಉದ್ಯೋಗಾವಕಾಶ ಕಲ್ಪಿಸಲಿದೆ ಎಂದು ಹೇಳಿದರು.
ಜೆಎಸ್‌ಎಸ್‌ಎಸ್‌ಟಿಯು ಉಪ ಕುಲಪತಿ ಡಾ.ಎ.ಎನ್. ಸಂತೋಷ್‌ಕುವಾರ್ ಮಾತನಾಡಿ, ಮಹಿಳಾ ಭದ್ರತೆಗೆ ಸಂಬಂಧಿಸಿದ ಎಸ್‌ಒಎಸ್ ವ್ಯವಸ್ಥೆ ಮತ್ತು ಸ್ಟಾರ್ಟಪ್‌ಗಳ ಮೂಲಸೌಕಂರ್ು, ತಂತ್ರಜ್ಞಾನಗಳಂತಹ ನೈಜ ಸಮಸ್ಯೆಗಳಿಗೆ ಹ್ಯಾಕಥಾನ್ ಮೂಲಕ ವಿದ್ಯಾರ್ಥಿಗಳು ಪರಿಹಾರಗಳನ್ನು ಒದಗಿಸುತ್ತಿದ್ದಾರೆ ಎಂದರು.
ಜೆಎಸ್‌ಎಸ್‌ಎಸ್‌ಟಿ ಕುಲಸಚಿವ ಡಾ.ಎಸ್.ಎ.ಧನರಾಜ್, ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಂುರಿಂಗ್ ವಿಭಾಗದ ಮುಖ್ಯಸ್ಥ ಡಾ.ಎಸ್.ಶ್ರೀನಾಥ್, ಡೀನ್ ಡಾ.ಅನಿಲ್‌ಕುವಾರ್ ಇದ್ದರು.