ಶಿಬಿರದ ಸದುಪಯೋಗ ಪಡೆದುಕೊಳ್ಳಿ

Take advantage of the camp
ಬಾದಾಮಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ಕಣ್ಣು, ಕಿವಿ ಹಾಗೂ ಗಂಟಲು ಉಚಿತ ತಪಾಸಣೆ ಶಿಬಿರದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ಎಚ್.ಮಹಾಲಿಂಗಪೂರ ಮಾತನಾಡಿದರು. ಡಾ.ವಿ.ಕೆ. ಶೆಟ್ಟರ, ಡಾ.ಸವಿತಾ ಕಡೆಮನಿ, ಡಾ. ರೇಖಾ ಮೇತ್ರಿ, ಎನ್.ಎಚ್. ಕಿತ್ತಲಿ ಮತ್ತಿತರರಿದ್ದಾರೆ.
Published on

ಬಾದಾಮಿ: ಹಿರಿಯ ನಾಗರಿಕರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂಬ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಶಿಬಿರ ಆಯೋಜನೆ ಮಾಡಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಎಂ.ಬಿ. ಪಾಟೀಲ ಹೇಳಿದರು.

ನಗರದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ಕಣ್ಣು, ಕಿವಿ ಹಾಗೂ ಗಂಟಲು ತಪಾಸಣೆ ಶಿಬಿರ ಉದ್ದೇಶಿಸಿ ಅವರು ಮಾತನಾಡಿದರು.

ತಾಲೂಕಾಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ವಿ.ಕೆ. ಶೆಟ್ಟರ, ನೇತ್ರ ತಜ್ಞೆ ಡಾ.ಸವಿತಾ ಕಡೆಮನಿ, ಇಎನ್‌ಟಿ ವೈದ್ಯೆ ಡಾ. ರೇಖಾ ಮೇತ್ರಿ, ನೇತ್ರ ಸಹಾಯಕ ಎನ್.ಎಚ್. ಕಿತ್ತಲಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ಎಚ್. ಮಹಾಲಿಂಗಪೂರ, ಎಂಆರ್‌ಡಬ್ಲೂ ಎಂ.ಬಿ.ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net