ಸಂಘದ ಲಾಭ ಪಡೆದು ಬದುಕು ಹಸನಾಗಿಸಿಕೊಳ್ಳಿ

28 10 2025_BGR_RURAL-PAGE_5B
ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಯಲಿಯೂರಲ್ಲಿ ಹಮ್ಮಿಕೊಂಡಿದ್ದ ಹಾಲು ಉತ್ಪಾದಕರ ಸಹಕಾರ ಸಂದಿಂದ ನಿರ್ಮಿಸಿರುವ ನೂತನವಾಗಿ ಕನ್ವೆನ್ಷನ್​ ಹಾಲ್​ಅನ್ನು ಉಸ್ತುವಾರಿ ಸಚಿವ ಕೆ.ಎಚ್​.ಮುನಿಯಪ್ಪ ಉದ್ಘಾಟಿಸಿದರು. ಬಮುಲ್​ ನಿರ್ದೇಶಕ ಎಸ್​.ಪಿ.ಮುನಿರಾಜು, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠ್ಠಾನದ ಅಧ್ಯಕ್ಷ ರಾಜಣ್ಣ, ಬಯಪ ಅಧ್ಯಕ್ಷ ವಿ.ಶಾಂತಕುಮಾರ್​,ಯಲಿಯೂರು ಡೇರಿ ಅಧ್ಯಕ್ಷ ರುವೀರ್​ ಇತರರು ಇದ್ದರು.
Published on

ಚನ್ನರಾಯಪಟ್ಟಣ: ಪ್ರತಿ ರೈತರು ಹಾಲು ಉತ್ಪಾದಕರ ಸಂದ ಸೇವಾ ಸೌಲಭ್ಯಗಳ ಮಾಹಿತಿ ತಿಳಿದು ಸದ್ಬಳಕೆ ಮಾಡಿಕೊಂಡು ಬದುಕು ಹಸನಾಗಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್​.ಮುನಿಯಪ್ಪ ಹೇಳಿದರು. ಚನ್ನರಾಯಪಟ್ಟಣ ಹೋಬಳಿಯ ಯಲಿಯೂರು ಹಾಲು ಉತ್ಪಾದಕರ ಸಹಕಾರ ಸಂದ ವತಿಯಿಂದ ನೂತನವಾಗಿ ನಿರ್ಮಾಣವಾಗಿರುವ ಎಂಪಿಸಿಎಸ್​ ಕನ್ವೆನ್ಷನ್​ ಹಾಲ್​ (ನಂದಿನಿ ಭವನ)ಉದ್ಘಾಟಿಸಿ ಮಾತನಾಡಿದರು. ಯಲಿಯೂರು ರೇಷ್ಮೆಮತ್ತು ಹೈನುಗಾರಿಕೆಯನ್ನು ಹೆಚ್ಚಾಗಿ ಹೊಂದಿರುವ ಒಂದು ಶಾಂತಗ್ರಾಮವಾಗಿದೆ.ಸ್ವಂತ ಹಣದಿಂದ ರೈತ ಸದಸ್ಯರೆಲ್ಲರೂ ಸೇರಿ ಕಟ್ಟಡ ಪೂರ್ಣಗೊಳಿಸಿರುವುದು ಹರ್ಷ ತಂದಿದೆ ಎಂದ ಅವರು, ಮುಂದಿನ ಹಂತದ ಮೇಲಿನ ಮಹಡಿ ನಿರ್ಮಿಸಲು ಹತ್ತು ಲಕ್ಷ ರೂ. ಧನಸಹಾಯ ನೀಡುವೆ ಎಂದರು.

ಬಮುಲ್​ ನಿರ್ದೇಶಕ ಎಸ್​.ಪಿ.ಮುನಿರಾಜು ಮಾತನಾಡಿ, ಸಂದ ಅಭಿವೃದ್ಧಿಗಾಗಿ ಸಚಿವರ ನೆರವು ಇರುತ್ತದೆ. ನೂತನ ಭವನ ನಿರ್ಮಾಣಕ್ಕೆ ಕಾರಣಕರ್ತರಾದ ಎಲ್ಲ ಸದಸ್ಯರು ಮತ್ತು ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸುವೆ ಎಂದರು. ಇದೇ ವೇಳೆ ಕೆಪಿಸಿಸಿ ಸದಸ್ಯ ಚಿನ್ನಪ್ಪ, ಆರ್ಯ ವೈಶ್ಯ ಸಮಾಜದ ಅಧ್ಯಕ್ಷ ರಾಮ ಪ್ರಸಾದ್​, ಬಯಪ ನಿರ್ದೇಶಕ ಪ್ರಸನ್ನ ಕುಮಾರ್​, ದೇವನಹಳ್ಳಿ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಕೆ.ಸಿ. ಮಂಜುನಾಥ್​, ವಿಜಯಪುರ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ವೆಂಕಟೇಶ್​, ಎಸ್ಸಿ ಟಕದ ಅಧ್ಯಕ್ಷ ಚೌಡಪ್ಪನಹಳ್ಳಿ ಲೋಕೇಶ್​, ಯಲಿಯೂರು ಡೇರಿ ಉಪಾಧ್ಯೆಅನುಪಮಾ, ನಿರ್ದೇಶಕರಾದ ಪ್ರಕಾಶ್​, ಮುನಿರಾಜು, ರಾಮಾಂಜಿನಯ್ಯ, ಬಸವರಾಜ್​, ಸಂಪಂಗಿ ರಾಮಯ್ಯ, ಎಚ್​ಆನಂದಗೌಡ,ಸವಿತಾ, ಮುನಿರಾಜು, ಭೈರಪ್ಪ, ಲಕ್ಷ$್ಮಮ್ಮ, ನಾರಾಯಣಸ್ವಾಮಿ, ಮುಖಂಡರಾದ ಆನಂದ್​, ಸುನೀಲ್​, ಸಂದೀಪ್​, ಪ್ರಕಾಶ್​, ಹಾಗೂ ಸಂದ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net