

ವಿರಾಜಪೇಟೆ: ಜನಸಾಮಾನ್ಯರು ಕಡ್ಡಾಯವಾಗಿ ಸಾಮಾಜಿಕ ಭದ್ರತಾ ಯೋಜನೆಗಳ ಮಾಹಿತಿ ಮತ್ತು ಅದರ ಉಪಯೋಗಗಳ ಕುರಿತು ತಿಳಿದುಕೊಳ್ಳುವಂತಾಗಬೇಕು ಎಂದು ಅವಾರ್ಡ್ ಸಂಸ್ಥೆಯ ಜಿಲ್ಲಾ ಸಂಯೋಜಕ ಕೆ.ಎ.ಆಸೀಫ್ ಸಲಹೆ ನೀಡಿದರು.
ಕೊಡಗು ಜಿಲ್ಲಾ ಲೀಡ್ ಬ್ಯಾಂಕ್ ಮಡಿಕೇರಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂರ್ನಾಡು ಶಾಖೆ ಇವರ ಸಹಯೋಗದೊಂದಿಗೆ ಮಡಿಕೇರಿ ತಾಲೂಕಿನ ಹೊದ್ದೂರು ಗ್ರಾಮದಲ್ಲಿ ಗ್ರಾಮ ಪಂಚಾಯತಿಯ ಸಹಕಾರದೊಂದಿಗೆ ಇತ್ತೀಚೆಗೆ ನಡೆದ ಜನ ಸುರಕ್ಷಾ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ವಿಶೇ?ವಾಗಿ ಕೊಡಗು ಜಿಲ್ಲೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಅತೀ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳು ಅತೀ ಉಪಯೋಗಕರ. ಯೋಜನೆ ಮಾಡಿಸಿಕೊಳ್ಳದೆ ಇರುವವರು ಶೀಘ್ರದಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಕೋರಿದರು.
ಮೊಬೈಲ್ ಪೋನಿನಲ್ಲಿ ಬ್ಯಾಂಕ್‌ನಿಂದ ಎಂದು ಹೇಳಿ ಒಟಿಪಿ ಮತ್ತು ಕೆವೈಸಿ ಕೇಳಿ ಬರುವ ಕರೆಗಳು ಸೈಬರ್ ವಂಚಕರ ಜಾಲವಾಗಿದೆ. ಗ್ರಾಹಕರು ಪೋನಿನ ಮುಖಾಂತರ ಮಾಹಿತಿ ಹಂಚಿಕೊಳ್ಳಬಾರದು ಎಂದು ತಿಳಿಸಿದರು.
ಅನಾಮಧೇಯ ಕರೆಗಳು ಲಿಂಕ್‌ಗಳನ್ನು ಒತ್ತುವ ಮೂಲಕ ಸ್ಪಂದನೆ ನೀಡದಂತೆಯೂ ಸೈಬರ್ ವಂಚಕರ ಬಲೆಯಿಂದ ಎಚ್ಚರ ವಹಿಸಬೇಕು. ಕಣ್ಣು ತಪ್ಪಿನಿಂದ ಮೋಸ ಜರುಗಿದರೆ ಕೂಡಲೆ ೧೯೩೦ ಗೆ ಕರೆಮಾಡುವ ಮುಖಾಂತರ ಸೈಬರ್ ವಂಚಕರಿಗೆ ಕಡಿವಾಣ ಹಾಕಬೇಕೆಂದು ಮಾಹಿತಿ ನೀಡಿದರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂರ್ನಾಡು ಶಾಖೆಯ ವ್ಯವಸ್ಥಾಪಕ ಅಶ್ವಿನ್ ಕುಮಾರ್ ಮಾತನಾಡಿ, ಮುಖ್ಯವಾಗಿ ಯೋಜನೆಗಳಲ್ಲಿ ಒಂದಾದ ಪ್ರಧಾನಮಂತ್ರಿ ಸುರಕ್ಷ ಭಿಮಾಯೋಜನೆ, ಮತ್ತು ಪ್ರಧಾನಮಂತ್ರಿ ಜೀವನ್ ಜ್ಯೋತಿ ಭಿಮಾ ಯೋಜನೆ ಸಂಪೂರ್ಣ ಮಾಹಿತಿ ನೀಡಿದರು.
ಹೊದ್ದೂರು ಗ್ರಾಮ ಪಂಚಾಯತಿ ಅಧ್ಯಕ್ಷ ಎಚ್.ಎ.ಹಂಸ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕೆ.ಎ.ಅಬ್ದುಲ್ಲಾ, ಹೊದ್ದೂರು ಗ್ರಾಮ ಪಂಚಾಯತಿ ಸಾಮಾಜಿಕ ನ್ಯಾಯ ಸ್ಥಾಯಿಸಮಿತಿ ಅಧ್ಯಕ್ಷ ಮೊಣ್ಣಪ್ಪ, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಅಧ್ಯಕ್ಷ ಎಂ.ಬಿ.ಹಮೀದ್, ಗ್ರಾಮ ಆಡಳಿತ ಅಧಿಕಾರಿಗಳಾದ ಸಂತೋ? ಪಾಟೀಲ್, ಗ್ರಾ.ಪಂ.ಸದಸ್ಯರಾದ ಪಾರ್ವತಿ, ಚೌರೀರ ನವೀನ್ ಮತ್ತು ಲಕ್ಷ್ಮಿ ಉಪಸ್ಥಿತರಿದ್ದರು.