ವಿಮೆ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ

13BTP01
ಬೆಟ್ಟದಪುರ ಸಮೀಪದ ಸಂಗರಶೆಟ್ಟಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಆಯೋಜಿಸಿದ ವಾರ್ಷಿಕ ಸಭೆಯಲ್ಲಿ ಮೈಮುಲ್ ವಿಸ್ತರಣಾಧಿಕಾರಿ ಸತೀಶ್ ಮಾತನಾಡಿದರು. ಕಾಳೇಗೌಡ, ಜ್ಯೋತಿ ಮಂಜುನಾಥ್, ಎಸ್.ಬಿ ಕುಮಾರ, ಎಸ್.ಕೆ ಪ್ರಕಾಶ ಇತರರಿದ್ದರು.
Published on

ಬೆಟ್ಟದಪುರ: ಮೈಸೂರು ಜಿಲ್ಲಾ ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ಹಾಗೂ ಹಸುಗಳಿಗೆ ನೀಡಲಾಗುತ್ತಿರುವ ವಿಮೆ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಉತ್ಪಾದಕರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಮೈಮುಲ್ ವಿಸ್ತರಣಾಧಿಕಾರಿ ಸತೀಶ್ ಸಲಹೆ ನೀಡಿದರು.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಸಂಗರಶೆಟ್ಟಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಶನಿವಾರ ಆಯೋಜಿಸಿದ್ದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಒಕ್ಕೂಟದಿಂದ ಉತ್ಪಾದಕರಿಗೆ ಅನುಕೂಲಕರವಾಗುವಂತಹ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇವುಗಳ ಬಗ್ಗೆ ಸೂಕ್ತ ಮಾಹಿತಿ ಪಡೆದುಕೊಂಡು ಸದ್ಬಳಕೆ ಮಾಡಿಕೊಳ್ಳಿರಿ. ಸಂಘದಲ್ಲಿ ಮಾಸಿಕ ಸಭೆ ಆಯೋಜಿಸುವಾಗ ವಿಸ್ತರಣಾಧಿಕಾರಿಗಳ ನೇತೃತ್ವದಲ್ಲಿ ಆಯೋಜಿಸಿ, ಚರ್ಚಿಸಬೇಕು. ಇದರಿಂದ ಮುಂದಿನ ಅಭಿವೃದ್ಧಿ ಬಗ್ಗೆ ಅರಿವು ಹೊಂದಬಹುದಾಗಿದೆ. 2024-25ನೇ ಸಾಲಿನಲ್ಲಿ 1,22,976 ನಿವ್ವಳ ರೂ. ಲಾಭ ಗಳಿಸಿದ್ದು, ಸಂಘದ ಅಭಿವೃದ್ಧಿಗೆ ಉತ್ಪಾದಕರು ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಸಹಕರಿಸಬೇಕು ಎಂದರು.

ಸಂಘದ ಅಧ್ಯಕ್ಷ ಕಾಳೇಗೌಡ, ಉಪಾಧ್ಯಕ್ಷ ಜ್ಯೋತಿ ಮಂಜುನಾಥ್, ನಿರ್ದೇಶಕರಾದ ಎಸ್.ಬಿ ಕುಮಾರ, ಎಸ್.ಕೆ ಪ್ರಕಾಶ, ರಾಧಾಕೃಷ್ಣ, ಎಸ್.ಬಿ.ಸೋಮಾಚಾರಿ, ಎಸ್.ಪಿ. ಸತೀಶ್, ಸಣ್ಣೇಗೌಡ, ಎಸ್.ಕೆ.ಅನಂತ, ಮಹಾದೇವಿ, ಎಸ್.ಎನ್.ಅನಿಲ್ ಕುಮಾರ್, ಸಿಇಒ ಎಸ್.ಎಸ್.ಮಹೇಶ್, ಸಿಬ್ಬಂದಿ ನವೀನ್ ಕುಮಾರ್ ಸೇರಿದಂತೆ ಸದಸ್ಯರು, ಗ್ರಾಮದ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net