ಗೃಹಲಕ್ಷ್ಮಿ ಯೋಜನೆ ಸದುಪಯೊಗ ಪಡಿಸಿಕೊಳ್ಳಿ

01 svr 01 GRUHALAXMI
Published on

ಸವಣೂರ: ಬಡ ಕುಟುಂಬದ ಸೂಕ್ತ ನಿರ್ವಹಣೆಗಾಗಿ ಸರ್ಕಾರ ತಾಯಂದಿರಿಗೆ ಪ್ರತಿ ತಿಂಗಳು ಮನೆ ಯಜಮಾನಿಗೆ 2 ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸಿದೆ. ಮನೆ ಯಜಮಾನಿ ಸರ್ಕಾರದ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಯಲವಿಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನೀಲಪ್ಪ ಗುಳಪ್ಪ ಮುಗದೂರ ತಿಳಿಸಿದರು.

ತಾಲೂಕಿನ ಯಲವಿಗಿ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ಏರ್ಪಡಿಸಿದ್ದ ಗೃಹಲಕ್ಷ್ಮಿ ಯೋಜನೆ ಚಾಲನೆ ನೀಡಿ ಅವರು ಮಾತನಾಡಿದರು. ಮಹಿಳೆಯರಿಗಾಗಿ ಸರ್ಕಾರ ಹತ್ತು ಹಲವಾರು ಯೋಜನೆಗಳನ್ನು ರೂಪಿಸಿದೆ. ಈಗಾಗಲೇ ಘೊಷಣೆ ಮಾಡಿರುವ ಯೋಜನೆಗಳನ್ನು ಸಂಪೂರ್ಣ ಜಾರಿಗೊಳಿಸಿರುವ ಸರ್ಕಾರ ಮುಂದಿನ ದಿನಮಾನದಲ್ಲಿ ಇನ್ನು ಉತ್ತಮ ಯೋಜನೆಗಳನ್ನು ನೀಡಲಿದೆ ಎಂದರು.

ಗ್ರಾಪಂ ಉಪಾಧ್ಯಕ್ಷೆ ಶಿಲ್ಪಾ ನಿಂಗನಗೌಡ ಹೊಸಮನಿ, ಪ್ರಮುಖರಾದ ಮಂಜುನಾಥ ಸೂರಿ, ವಿರೂಪಾಕ್ಷಪ್ಪ ರಾಮಜೋಗಿ, ಪ್ರಕಾಶ ಲಮಾಣಿ, ರುದ್ರಮುನಿ ಹಿರೇಮಠ, ಮಲ್ಲೇಶ ವಡ್ಡರ, ಮಹಿಳಾ ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಫಲಾನುಭವಿಗಳು, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net