

ತಿಪಟೂರು: ತೆಂಗು ಬೆಳೆಗೆ ವಿತರಿಸುತ್ತಿರುವ ಪರಿಕರಗಳನ್ನು ಸಕಾಲದಲ್ಲಿ ಪಡದು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು. ತಾಲೂಕು ತೋಟಗಾರಿಕೆ ಇಲಾಖೆ ಹಾಗೂ ತೆಂಗು ಅಭಿವೃದ್ಧಿ ಮಂಡಳಿ ಸಹಯೋಗದೊಂದಿಗೆ ಗುರುವಾರ ತಾಲೂಕಿನ ನೊಣವಿನಕೆರೆ ಹೋಬಳಿಯ ವಿ.ಮಲ್ಲೇನಹಳ್ಳಿಯಲ್ಲಿ ತೆಂಗಿನಲ್ಲಿ ಸಂಯೋಜಿತ ಬೇಸಾಯ ನಿರ್ವಹಣೆ ಯೋಜನೆಯಡಿ ರೈತರಿಗೆ ಪರಿಕರಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಸ್ತುತ ತೆಂಗಿನ ತೋಟದ ಇಳುವರಿ ರೈತರನ್ನು ಚಿಂತಾಕ್ರ್ರಾಂತರಾಗಿಸಿದೆ. ಈ ಪರಿಸ್ಥಿತಿಯಿಂದ ರೈತರನ್ನು ಉಳಿಸಲು ಸರ್ಕಾರ ಸರ್ವಸನ್ನಾದ್ದಾವಾಗಿದ್ದು, ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ. ಈ ಪರಿಕರಗಳನ್ನು ಬಳಸಿಕೊಂಡರೆ ತೆಂಗು ಉತ್ಪಾದನೆ ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಚ್.ಆರ್.ಚಂದ್ರಶೇಖರ್ ಮಾತನಾಡಿ, ಮಣ್ಣಿನ ಫಲವತ್ತತೆಯನ್ನು ಕಾಪಾಡಲು ಹಸಿರೆಲೆ ಗೊಬ್ಬರ, ಸಾವಯವ ಗೊಬ್ಬರ ಬಳಸಬೇಕು. ಕಾಂಡ ರಸ ಸೋರುವ ರೋಗಕ್ಕೆ ಹೆಕ್ಸಾಕೋನಾಜೋಲ್ ಔಷಧವನ್ನು ಪ್ರತಿ ಗಿಡಕ್ಕೆ 5 ಮೀ.ಲಿ. ನಂತೆ ಬೇರಿನ ಮುಖಾಂತರ ಉಪಚರಿಸಬೇಕೆಂದು ಹಾಗೂ ವಿವಿಧ ಪರಿಕರಗಳನ್ನು ಬಳಸುವ ವಿಧಾನ ಹಾಗೂ ಅವುಗಳಿಂದಾಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.
ದಸರೀಘಟ್ಟ, ರಂಗಾಪುರ ಹಾಗೂ ಹುಣಸೇಘಟ್ಟ ಗ್ರಾಪಂ ಅಧ್ಯೆ ಜಯಂತಮ್ಮ, ಉಪಾಧ್ಯಕ್ಷರಾದ ವಿಶ್ವನಾಥ್, ಸದಸ್ಯರಾದ ಸಿದ್ದೇಶ್ ಮಲ್ಲೇನಹಳ್ಳಿ, ಅಧಿಕಾರಿಗಳಾದ ಎಸ್.ಅಜಿತ್ ಕುಮಾರ್, ಟಿ.ಆರ್.ಶಮಂತ, ಇಲಾಖೆಯ ಸಿಬ್ಬಂದಿಗಳಾದ ಜೆ.ಟಿ.ರತ್ನಮ್ಮ, ಶ್ರೀನಿವಾಸಗೌಡ, ಸತೀಶ್, ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ಅಶ್ವಿನಿ ಬಡ್ನಿ, ಎಂ.ಕರಣ್, ಡಾ ಮಲ್ಲಿಕಾರ್ಜುನ ಹೆಬ್ಬಾಳ ಇದ್ದರು.