ಉಚಿತ ತಪಾಸಣೆಗಳ ಸದುಪಯೋಗ ಪಡೆಯಿರಿ

mm 23-8
Published on

ವಿಜಯಪುರ:ಆರೋಗ್ಯಯುತ ಜೀವನ ಶೈಲಿಯಿಂದ ಬಿಪಿ ಮತ್ತು ಸಕ್ಕರೆ ಕಾಯಿಲೆಗಳಿಂದ ಮುಕ್ತರಾಗಬಹುದು. ಯುವಜನತೆ ದುಶ್ಚಟಗಳಿಂದ ದೂರವಿದ್ದರೆ ಉತ್ತಮ ಆರೋಗ್ಯ ಸಂಪಾದಿಸಲು ಸಾಧ್ಯ ಎಂದು ಬಿ.ಎಂ. ಪಾಟೀಲ ವೈದ್ಯಕಿಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಶ್ರವಣಕುಮಾರ ಪೋಟಕರ ಹೇಳಿದರು.

ನಗರದ ಬಿಎಲ್​ಡಿಇ ಸಂಸ್ಥೆಯ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಮಹಾವಿದ್ಯಾಲಯದ ಐಕ್ಯೂಎಸಿ, ಮಹಿಳಾ ಸಬಲೀಕರಣ ಕೋಶ, ಬಿ.ಎಂ. ಪಾಟೀಲ ವೈದ್ಯಕಿಯ ಮಹಾವಿದ್ಯಾಲಯ ಹಾಗೂ ಎಂ.ಬಿ. ಪಾಟೀಲ ಫೌಂಡೇಶನ್​ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯುವ ಜನತೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಜತೆಗೆ ರೋಗಗಳನ್ನು ತಡೆಗಟ್ಟುವ ಮಾಗೋರ್ಪಾಯಗಳ ಕುರಿತು ಚರ್ಚಿಸಿದರು. ಹಲವು ರೋಗಗಳನ್ನು ತಡೆಗಟ್ಟಲು ಮುಂಚಿತವಾಗಿಯೇ ಲಸಿಕೆಗಳನ್ನು ಹಾಕಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಬಿ.ಎಂ. ಪಾಟೀಲ ವೈದ್ಯಕಿಯ ಮಹಾವಿದ್ಯಾಲಯದಿಂದ ಹಮ್ಮಿಕೊಂಡ ವೈದ್ಯಕಿಯ ಉಚಿತ ತಪಾಸಣೆಗಳ ಸದುಪಯೋಗಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಮಹಾವಿದ್ಯಾಲಯದ ರಕ್ತನಿಧಿ ಅಧಿಕಾರಿ ಡಾ. ಸತೀಶ ಅರಕೇರಿ ರಕ್ತದಾನದ ಕುರಿತು ಮಾಹಿತಿ ನೀಡಿ, ರಕ್ತದಾನದಿಂದ ಹಲವು ಜನರ ಜೀವ ಉಳಿಸಬಹುದು. ರಕ್ತದ ಬೇಡಿಕೆ ಇದ್ದಾಗ ಮಾತ್ರ ರಕ್ತದ ಬೆಲೆ ನಿಮಗೆ ಗೊತ್ತಾಗುತ್ತದೆ. ಪ್ರತಿ ವರ್ಷ ಭಾರತದಲ್ಲಿ 4.5 ಮಿಲಿಯನ್​ ಜೀವಗಳನ್ನು ರಕ್ತದಾನದಿಂದ ಉಳಿಸಲಾಗುತ್ತಿದೆ. ರಕ್ತದಾನ ಎಲ್ಲರ ಆದ್ಯ ಕರ್ತವ್ಯವಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ವೈ. ತಮ್ಮಣ್ಣ ಮಾತನಾಡಿ, ಉತ್ತಮ ಆರೋಗ್ಯ ಪಡೆಯಲು ಆಹಾರ ಶೈಲಿ ಮತ್ತು ಜೀವನ ಶೈಲಿ ಬದಲಾಯಿಸಿಕೊಳ್ಳಬೇಕು. ರಕ್ತದಾನ ಎಲ್ಲ ದಾನಗಳಲ್ಲಿ ಶ್ರೇಷ್ಟವಾದುದು ಎಂದು ತಿಳಿಸಿದರು.

ಐಕ್ಯೂಎಸಿ ಸಂಯೋಜಕಿ ಡಾ. ಭಕ್ತಿ ಮಹೀಂದ್ರಕರ, ವಿ.ಎಸ್​. ನಂದೀಶ, ದೀಪಾ ಲಗಳಿ ಡಾ. ಸೂರ್ಯಕಾಂತ ಬಿರಾದಾರ ಮತ್ತಿತರರಿದ್ದರು. ಅನಿತಾ ಡೊಳ್ಳಿ ಸ್ವಾಗತಿಸಿದರು. ಬನುಶ್ರೀ ಕುಲಕರ್ಣಿ ನಿರೂಪಿಸಿದರು. ಶೈಲಾ ರೆಬಗೊಂಡ ವಂದಿಸಿದರು.

ವಿಜಯಪುರದ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಮಹಾವಿದ್ಯಾಲಯದಲ್ಲಿ ಆರೋಗ್ಯ ಅರಿವು ಕಾರ್ಯಕ್ರಮ ನಡೆಯಿತು. ಡಾ. ಶ್ರವಣಕುಮಾರ ಪೋಟಕರ. ಡಾ. ಸತೀಶ ಅರಕೇರಿ, ಡಾ. ವೈ. ತಮ್ಮಣ್ಣ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net