ಕಸ ವಿಲೇವಾರಿ ಘಟಕ ಕಾರ್ಯಾರಂಭಕ್ಕೆ ಕ್ರಮ ಕೈಗೊಳ್ಳಿ

26_06_2025_BGR_RURAL_PAGE_5A
ಹೊಸಕೋಟೆ ನಗರಸಭೆ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸ್ಥಾಯಿ ಸಮಿತಿ ಅಧ್ಯಕ್ಷರ ಪ್ರಥಮ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ದೇವರಾಜ್​, ನಗರಸಭೆ ಪೌರಾಯುಕ್ತ ನೀಲಲೋಚನ ಪ್ರಭು, ಸ್ಥಾಯಿ ಸಮಿತಿ ಸದಸ್ಯರಾದ ಸುಗುಣ ಮೋಹನ್​, ನಿತಿನ್​ ಶ್ರೀನಿವಾಸ್​, ಪವಿತ್ರಾ ಶರತ್​ ಇದ್ದರು.
Published on

ಹೊಸಕೋಟೆ : ದಿನದಿಂದ ದಿನಕ್ಕೆ ನಗರದಲ್ಲಿ ಕಸ ವಿಲೇವಾರಿ ಮಾಡುವುದೇ ದೊಡ್ಡ ಸಮಸ್ಯೆಯಾಗುತ್ತಿದ್ದು, ಕಲ್ಲಹಳ್ಳಿ ಬಳಿ ನಿಮಾರ್ಣ ಮಾಡಿರುವ ಕಸ ವಿಲೇವಾರಿ ಘಟಕ ಕಾರ್ಯಾರಂಭಕ್ಕೆ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳಿ ಎಂದು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ದೇವರಾಜ್​ ಸೂಚಿಸಿದರು.

ನಗರಸಭೆ ಕಚೇರಿಯಲ್ಲಿ ಹಮ್ಮಿಕೊಂಎಇದ್ದ ಸ್ಥಾಯಿ ಸಮಿತಿ ಅಧ್ಯಕ್ಷರ ಪ್ರಥಮ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನಗರಸಭೆ ಕಸ ವಿಲೇವಾರಿಗೆ ಕಲ್ಲಹಳ್ಳಿ ಬಳಿ ನಿಮಾರ್ಣ ಮಾಡಿರುವ ಕಸ ವಿಲೇವಾರಿ ಘಟಕ ಪ್ರಾರಂಭಕ್ಕೆ ಅಲ್ಲಿನ ಗ್ರಾಮಸ್ಥರಿಗೆ ಸಾಧಕ-ಭಾಧಕಗಳ ಬಗ್ಗೆ ಮನವರಿಕೆ ಮಾಡುವ ಮೂಲಕ ತ್ವರಿತ ಕಾರ್ಯಾರಂಭಕ್ಕೆ ಮುಂದಾಗಿ, ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ನಗರದಲ್ಲಿ ಕಸ ವಿಲೇವಾರಿಗೆ ದೊಡ್ಡ ಸಮಸ್ಯೆಯಾಗಲಿದೆ ಎಂದರು.

ನಗರಸಭೆಯಲ್ಲಿ ಬಿ&ಖಾತೆ, ಇ&ಖಾತೆಗಾಗಿ ಬರುವ ನಾಗರಿಕರಿಗೆ ಅಧಿಕಾರಿಗಳು ಅಗತ್ಯ ದಾಖಲಾತಿಗಳ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿ ದಾಖಲಾತಿಗಳನ್ನು ಪಡೆದು ಸಾರ್ವಜನಿರಿಗೆ ಉತ್ತಮ ಸೇವೆ ನೀಡಿ. ಕಂದಾಯ ಇಲಾಖೆಯಿಂದ ನಗರದ ಅಭಿವೃದ್ಧಿಗೆ ಅಗತ್ಯ ಸಂಪನ್ಮೂಲ ಕ್ರೋಡಿಕರಣ ಆಗಬೇಕು. ಆರೋಗ್ಯ ಇಲಾಖೆಯಲ್ಲಿ ದೈನಂದಿನ ಕಸ ವಿಲೆವಾರಿಗೆ ನಾಗರಿಕರಿಗೆ ಸೂಕ್ತ ಮಾರ್ಗದರ್ಶನ ನೀಡಿ ಮನೆ ಮನೆ ಕಸ ಸಂಗ್ರಹಣೆಗೆ ಮುಂದಾಗಬೇಕು ಎಂದರು. ನಗರಸಭೆ ಪೌರಾಯುಕ್ತ ನೀಲಲೋಚನ ಪ್ರಭು ಮಾತನಾಡಿ, ನಗರದಲ್ಲಿ ಎಲ್ಲೆಂದರಲ್ಲಿ ಕಸ ಸುರಿಯುವ ಜನ ಹೆಚ್ಚಾಗಿದ್ದು, ನಗರಸಭೆ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದರೆ ದಂಡ ಕಟ್ಟಬೇಕಾಗುತ್ತದೆ. ಆದ್ದರಿಂದ ನಗರದ ಸ್ವಚ್ಛತೆಗೆ ನಗರಸಭೆ ಸಿಬ್ಬಂದಿ ಜತೆಗೆ ನಾಗರಿಕರು ಸಹಕಾರ ನೀಡಬೇಕು ಎಂದರು.

ಆರೋಗ್ಯ ವಿಭಾಗದ ಎಇಇ ರವೀಂದ್ರ, ಕಂದಾಯ ನಿರೀಕ್ಷಕ ತ್ಯಾಗರಾಜ್​, ಆರೋಗ್ಯ ನಿರೀಕ್ಷಕಿ ಶೋಭಾ, ಇಂಜಿನಿಯರ್​ಗಳಾದ ಗಂಗಾರೆಡ್ಡಿ, ಸತೀಶ್​, ವೆಂಕಟೇಶ್​, ವ್ಯವಸ್ಥಾಪಕ ವೆಂಕಟಮರಣಪ್ಪ, ಲೆಕ್ಕಪರಿಶೋಧಕ ವಿಜಿ, ಸಮುದಾಯ ಸಂಘಟನೆ ಅಧಿಕಾರಿ ಮಂಗಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net