

ರಾಯಚೂರು: ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ತರಗತಿಗೆ ಅನುಮತಿ ಪಡೆದಿದ್ದರೂ ಕೇವಲ ಇಂಗ್ಲಿಷ್ ಮಾಧ್ಯಮ ತರಗತಿ ಮಾತ್ರ ನಡೆಸುತ್ತಿರುವ ತಾಲೂಕಿನ ಶಕ್ತಿನಗರದ ಕೆಪಿಸಿಎಲ್ ಪ್ರಾಥಮಿಕ ಮತ್ತು ಪ್ರೌಢಶಾಲೆ ಆಡಳಿತ ಮಂಡಳಿವ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಲ್ಲಾ ಕನ್ನಡ ಕ್ರಿಯಾ ಸಮಿತಿ ಒತ್ತಾಯಿಸಿದೆ.
ಸಮಿತಿ ನಿಯೋಗ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ರಮೇಶಗೆ ಶನಿವಾರ ಮನವಿ ಸಲ್ಲಿಸಿ, ಆರ್‌ಟಿಪಿಎಸ್ ಮತ್ತು ವೈಟಿಪಿಎಸ್‌ನ ನೌಕರರ ಕನ್ನಡ ಮಾಧ್ಯಮದಲ್ಲಿ ಕಲಿಯಬೇಕು ಎನ್ನುವ ಮಕ್ಕಳು ಇದರಿಂದಾಗಿ ಇತರ ಶಾಲೆಗಳಿಗೆ ಪ್ರವೇಶ ಪಡೆಯಬೇಕಾಗಿದೆ ಎಂದು ದೂರಿದರು.
ಕೆಪಿಸಿಎಲ್ ಶಾಲೆ ನಿರ್ವಹಣೆಯನ್ನು ದಯಾನಂದ ಆಂಗ್ಲೋ ವೇದಿಕೆ ಎಂಬ ಖಾಸಗಿ ಸಂಸ್ಥೆಗೆ ವಹಿಸಿದ್ದು, ಸಂಸ್ಥೆ ಈ ವರ್ಷದಿಂದ ಕನ್ನಡ ಮಾಧ್ಯಮಕ್ಕೆ ಪ್ರವೇಶ ಪಡೆಯುವುದನ್ನು ಬಂದ್ ಮಾಡಿದೆ. ನಿಯಮಾವಳಿ ಪ್ರಕಾರ ಎರಡು ಮಾಧ್ಯಮಗಳಲ್ಲಿ ತರಗತಿಗಳನ್ನು ನಡೆಸಬೇಕು. ಆದರೆ ಅದನ್ನು ಉಲ್ಲಂಸಿ ಕನ್ನಡ ಮಾಧ್ಯಮ ರದ್ದುಗೊಳಿಸಲಾಗಿದೆ.
ಶಾಲೆಯಲ್ಲಿ ಕನ್ನಡ ಮಾಧ್ಯಮ ತರಗತಿ ರದ್ದುಗೊಳಿಸುವುದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಗಮನಕ್ಕಿದ್ದರೂ ಯಾವುದೇ ಕ್ರಮಕೈಗೊಳ್ಳದೆ ನಿರ್ಲಕ್ಷ ವಹಿಸಿದ್ದು, ಕೂಡಲೇ ಕನ್ನಡ ಮಾಧ್ಯಮ ತರಗತಿ ಆರಂಭಕ್ಕೆ ಸೂಚನೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ನಡುಮನಿ, ಗೌರವಾಧ್ಯಕ್ಷ ರಫೀಕ್ ಅಹ್ಮದ್, ಪದಾಕಾರಿಗಳಾದ ರಾಮಲಿಂಗಪ್ಪ, ಬಷೀರ್ ಅಹ್ಮದ್ ಹೊಸಮನಿ, ರುದ್ರಯ್ಯ ಗುಣಾರಿ, ರಾಮಣ್ಣ ಮ್ಯಾದಾರ್, ಮಹೇಂದ್ರ ಸಿಂಗ್ ಇದ್ದರು.