

ಬೆಳಗಾವಿ: ಜಿಲ್ಲೆಯಲ್ಲಿ ಅಪಘಾತಗಳ ಪ್ರಮಾಣ ತಗ್ಗಿಸಲು ರಸ್ತೆ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ನಗರದ ಆಟೋರಿಕ್ಷಾ ವಾಹನಗಳಿಗೆ ಕಡ್ಡಾಯವಾಗಿ ಬಾಡಿಗೆ ದರ ನಿಗದಿಪಡಿಸಬೇಕು. ಜಿಲ್ಲಾ ಮುಖ್ಯರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ಅಳವಡಿಸಲಾಗಿರುವ ಹಂಪ್ಸ್ ಕೂಡಲೇ ತೆರವುಗೊಳಿಸಬೇಕು ಎಂದು ಜಿಲ್ಲಾದಿಕಾರಿ ಮೊಹಮ್ಮದ್ ರೋಷನ್ ಸೂಚನೆ ನೀಡಿದರು.
ಜಿಲ್ಲಾದಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಹಾಪುರ, ಉದ್ಯಮಬಾಗ, ಟಿಳಕವಾಡಿ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ 7 ಸಿಸಿ ಕ್ಯಾಮರಾ ಸ್ಥಗಿತಗೊಂಡಿವೆ. ಕೂಡಲೇ ಸರಿಪಡಿಸಲು ಸೂಚಿಸಬೇಕು ಎಂದು ಸ್ಮಾರ್ಟ್‌ಸಿಟಿ ಅದಿಕಾರಿಗಳಿಗೆ ತಿಳಿಸಿದರು.
ಏಕಮುಖ ಸಂಚಾರಕ್ಕೆ ನಿರ್ದೇಶನ: ಚನ್ನಮ್ಮ ವೃತ್ತದ ಬಳಿಯ ಜಿಲ್ಲಾ ಗ್ರಂಥಾಲಯ, ಜಿಪಂ ಕಚೇರಿ ಸುತ್ತಲಿನಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿದೆ. ಪಾರ್ಕಿಂಗ್ ಸ್ಥಳ ನಿಗದಿಪಡಿಸಿ ಒನ್‌ವೇ ರಸ್ತೆ ಮಾರ್ಪಡಿಸಿ ಟ್ರಾಫಿಕ್ ನಿಯಂತ್ರಣಕ್ಕೆ ಕ್ರಮ ವಹಿಸಬೇಕು. ಡಿಸಿ ಕಚೇರಿ, ಆರ್‌ಸಿ ಕಚೇರಿ ಹಾಗೂ ವಿವಿಧೆಡೆ ಅನಕೃತ ಪಾರ್ಕಿಂಗ್ ವಾಹನಗಳನ್ನು ತೆರವುಗೊಳಿಸಬೇಕು ಎಂದರು.
ಆಟೋರಿಕ್ಷಾ ದರ ನಿಗದಿಗೆ ಸೂಚನೆ: ಬೆಳಗಾವಿ ನಗರದಲ್ಲಿ ಸಂಚರಿಸುತ್ತಿರುವ ಆಟೋರಿಕ್ಷಾಗಳಿಗೆ ಪ್ರಯಾಣಿಕರಿಗಾಗಿ ಕಾಯ್ದಿರಿಸುವ ದರ, ಕನಿಷ್ಠ ದರ, ರಾತ್ರಿ ವೇಳೆ ದರ ನಿಗದಿಪಡಿಸಬೇಕು. ನಗರದ ವಿವಿಧೆಡೆ ರಸ್ತೆಗಳಲ್ಲಿ ಕ್ಯಾಮರಾ ಸ್ಥಿತಿಗತಿ ಪರಿಶೀಲಿಸಿ ಅಗತ್ಯವಿದ್ದರೆ ಸರಿಪಡಿಸಬೇಕು ಹಾಗೂ ಸೂಚನಾ ಪಲಕ ಅಳವಡಿಸಬೇಕು ಎಂದು ಡಿಸಿ ಸೂಚಿಸಿದರು ನಗರ ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಬನ್ಯಾಂಗ್, ಎಸ್ಪಿ ಡಾ. ಭೀಮಾಶಂಕರ ಗುಳೇದ ಮಾತನಾಡಿ, ಮ್ಯಾಪ್ ಮೂಲಕ ಅಗತ್ಯವಿರುವೆಡೆ ರಸ್ತೆಗಳನ್ನು ಒನ್ ವೇ ಮಾಡಬೇಕು. ಈಗಾಗಲೇ ನಗರದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆಯಾಗುತ್ತಿದೆ. ವಾಹನ ಸವಾರರು ರಸ್ತೆ ಸುರಕ್ಷತೆ ನಿಯಮ ಉಲ್ಲಂಸಿದರೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಶ್ರುತಿ, ಎಸ್.ಎಸ್.ಸೊಬರದ, ಸಾರಿಗೆ ಇಲಾಖೆ ಅಕಾರಿಗಳು ಇದ್ದರು.