ಬಳ್ಳಾರಿ : ತುಂಗಭದ್ರಾ ಜಲಾಶಯದ ಹೂಳು ತೆಗೆಯುವಂತೆ ಒತ್ತಾಯಿಸಿ, ಇಲ್ಲಿನ ಸರ್ಕಾರಿ ಅತಿಥಿ ಗೃಹದಲ್ಲಿ ತುಂಗಭದ್ರಾ ರೈತ ಸಂಘದಿಂದ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರಿಗೆ ಮನವಿ ಸಲ್ಲಿಸಲಾಯಿತು.
ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಡಾ. ಪುರುಷೋತ್ತಮ ಗೌಡ ಮಾತನಾಡಿ, ಈ ಜಲಾಶಯ ನೀರು ಬಳ್ಳಾರಿ, ಕೊಪ್ಪಳ, ರಾಯಚೂರು, ವಿಜಯನಗರ ಹಾಗೂ ಆಂಧ್ರದ ಕರ್ನೂಲ್, ಕಡಪ, ಅನಂತಪುರ ಸೇರಿದಂತೆ ತೆಲಂಗಾಣ ರಾಜ್ಯದ ಗದ್ವಾಲ್ , ಮೆಹಬೂಬ್ ನಗರಕ್ಕೆ ಹರಿಯುತ್ತಿವೆ. ಈ ಮೂರು ರಾಜ್ಯಗಳ ಒಂಬತ್ತು ಜಿಲ್ಲೆಗಳ 16 ಲಕ್ಷ ಎಕರೆಗೆ ಸಂಪೂರ್ಣ ನೀರು ಒದಗಿಸಲಾಗುತ್ತದೆ. ಜತೆಗೆ ಕೈಗಾರಿಕೆಗಳಿಗೆ ಮತ್ತು ಜನರಿಗೆ ಕುಡಿವ ನೀರು ಪೂರೈಸಲಾಗುತ್ತಿದೆ ಎಂದರು.
ಜಲಾಶಯ ನಿರ್ಮಿಸಿದಾಗ ಆರಂಭದಲ್ಲಿ 133 ಟಿ.ಎಂ.ಸಿ. ನೀರು ಸಂಗ್ರಹ ಹೊಂದಿತ್ತು. ಆದರೆ, ಹೀಗ 33 ಟಿಎಂಸಿ ಹೂಳು ತುಂಬಿದ್ದು, ಕೇವಲ ನೂರು ಟಿಎಂಸಿ ಮಾತ್ರ ಸಂಗ್ರಹವಾಗುತ್ತಿದೆ. ಇದರಿಂದ ಮೂರು ರಾಜ್ಯಗಳಿಗೆ ಜಲಾಶಯದ ನೀರು ಸಾಲುತ್ತಿಲ್ಲ. ಜನರಿಗೆ ಹಾಗೂ ಕೈಗಾರಿಕೆಗಳಿಗೆ ಕುಡಿವ ನೀರಿನ ಕೊರತೆಯಾಗುತ್ತಿ