

ಮುದ್ದೇಬಿಹಾಳ: ನವಜಾತ ಶಿಶುಗಳ ಆರೈಕೆಯಲ್ಲಿ ತಾಯಂದಿರಷ್ಟೇ ಆಶಾ ಕಾರ್ಯಕರ್ತೆಯರ ಪಾತ್ರವೂ ಮಹತ್ವದ್ದಾಗಿದೆ ಎಂದು ತಾಲೂಕು ಸರ್ಕಾರಿ ಆಸ್ಪತ್ರೆ ಮಕ್ಕಳ ತ ಡಾ.ಪರಶುರಾಮ ವಡ್ಡರ ಹೇಳಿದರು.
ಪಟ್ಟಣದಲ್ಲಿ ಚೈತ್ರಾ ಆರೋಗ್ಯ ಮತ್ತು ಶಿಣ ಸೇವಾ ಟ್ರಸ್ಟ್, ಅರ್ಜುನ ಆಸ್ಪತ್ರೆ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನಾಚರಣೆ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಆಶಾ ಕಾರ್ಯಕರ್ತೆಯರಿಗೆ ನವಜಾತ ಶಿಶುಗಳ ಆರೈಕೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ನವಜಾತ ಶಿಶುಗಳಲ್ಲಿ ಆರೋಗ್ಯ ಸಮಸ್ಯೆ ಕಂಡಾಗ ತಡಮಾಡದೆ ಸಮೀಪದ ಸರ್ಕಾರಿ ಆಸ್ಪತ್ರೆಗಾಗಲಿ, ಮಕ್ಕಳ ವೈದ್ಯರಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಇದರಿಂದ ಶಿಶುಗಳ ಅಕಾಲಿಕ ಮರಣ ತಡೆಗಟ್ಟಬಹುದು ಎಂದರು.
ಎಂಜಿಎಂಕೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಕೆ.ಹರನಾಳ ಮಾತನಾಡಿ, ಡಾ.ಪರಶುರಾಮ, ಡಾ.ನಿಸರ್ಗ ಅವರು ಮಕ್ಕಳ ಮತ್ತು ಮಹಿಳೆಯರ ಆರೋಗ್ಯ ರಣೆಗೆ ಪಣ ತೊಟ್ಟು ಹೊಸ ವಿಧಾನಗಳ ಮೂಲಕ ಜಾಗೃತಿ ಮೂಡಿಸುತ್ತಿರುವುದು ಶ್ಲಾನೀಯ. ಟ್ರಸ್ಟ್ ಅಧ್ಯ ಯಮನಪ್ಪ ವಡ್ಡರ ಅವರ ಪ್ರೋತ್ಸಾಹ, ಪ್ರಯತ್ನ ಮಾದರಿಯಾದದ್ದಾಗಿದೆ ಎಂದರು.
ಪುರಸಭೆ ಅಧ್ಯ ಮಹಿಬೂಬ ಗೊಳಸಂಗಿ, ಅರ್ಜುನ ಆಸ್ಪತ್ರೆಯ ಎಂಡಿ ಡಾ.ನಿಸರ್ಗ ಕೋಟುಮಚಗಿ, ಹಿರಿಯ ಪತ್ರಕರ್ತ ಪುಂಡಲೀಕ ಮುರಾಳ, ಟ್ರಸ್ಟ್ ಉಪಾಧ್ಯ ಶರಣಪ್ಪ ವಡ್ಡರ ಮಾತನಾಡಿದರು.
ಟ್ರಸ್ಟ್ ಅಧ್ಯ ಯಮನಪ್ಪ ವಡ್ಡರ ಅಧ್ಯತೆ ವಹಿಸಿದ್ದರು. ನಿವೃತ್ತ ಬಿಎಸ್ಎನ್ಎಲ್ ಅಧಿಕಾರಿ ನೀಲಕಂಠಪ್ಪ ಕೋಟುಮಚಗಿ, ತಾಲೂಕು ಪ್ರಾಥಮಿಕ ವೈದ್ಯರ ಸಂದ ಅಧ್ಯ ಬಸವರಾಜ ಬಡಿಗೇರ, ಆಶಾ ಸುಗಮಕಾರರಾದ ತಂಗಡಗಿಯ ರೇಣುಕಾ ಚಲವಾದಿ, ಗರಸಂಗಿಯ ಭಾರತಿ ಮುರಾಳ, ಮುಖ್ಯಾಧ್ಯಾಪಕ ಮಹಾಂತೇಶ ಉಗರಗೋಳ, ಪರಶುರಾಮ ಕೊಣ್ಣೂರ ಇದ್ದರು.
ಶಂಕರ ದೊಡಮನಿ ಪ್ರಾರ್ಥಿಸಿದರು. ಬಸವರಾಜ ಬೆಳ್ಳಿಕಟ್ಟಿ ಸ್ವಾಗತಿಸಿದರು. ಮಂಜುನಾಥ ಪಡದಾಳಿ ಅತಿಥಿ ಪರಿಚಯಿಸಿದರು. ಕುಮಾರ ವಡ್ಡರ ಕಾರ್ಯಕ್ರಮ ನಿರ್ವಹಿಸಿದರು.