

ಲಿಂಗಸುಗೂರು: ಸಿಂಧನೂರಿನಲ್ಲಿ ಇತ್ತೀಚಿಗೆ ನಡೆದ ಕಾಲೇಜು ವಿದ್ಯಾರ್ಥಿನಿ ಕೊಲೆ ಮತ್ತು ಮಾನ್ವಿ ತಾಲೂಕಿನಲ್ಲಿ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ಖಂಡಿಸಿ ಎಸ್‌ಎಫ್‌ಐ, ಜನವಾದಿ ಮಹಿಳಾ ಸಂಘ, ಟ್ರೇಡ್ ಯೂನಿಯನ್ ಸಂಘಟನೆ ನೇತೃತ್ವದಲ್ಲಿ ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಲಿಂಗಸುಗೂರು ಪಟ್ಟಣದಿಂದ ಸಿಂಧನೂರು ಕಾಲೇಜಿಗೆ ವಿದ್ಯಾಭ್ಯಾಸಕ್ಕೆ ತೆರಳುತ್ತಿದ್ದ ವಿದ್ಯಾರ್ಥಿಯ ಕೊಲೆಗೈದ ದುಷ್ಕರ್ಮಿ ಮತ್ತು ಮಾನ್ವಿ ತಾಲೂಕಿನಲ್ಲಿ ಬಾಲಕಿ ಮೇಲೆ ಅತ್ಯಾಚಾರಗೈದವಗೆ ಕಠಿಣ ಕಾನೂನು ಶಿಕ್ಷೆ ವಿಧಿಸಬೇಕು. ನೊಂದ ಕುಟುಂಬಗಳಿಗೆ ಪರಿಹಾರ ನೀಡಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರಮುಖರಾದ ಮಹ್ಮದ್ ಹನೀಫ್, ಫಕ್ರುದ್ದಿನ್, ಅಲ್ಲಾಬಕ್ಷಾ, ಶ್ರೀಧರ, ಹಾಜಿಮೌಲಾ, ಬಾಬಾ ಜಾನಿ, ವೆಂಕಟೇಶ, ವನಜಾಕ್ಷಿ, ಸಾಹೇರಖಾನ್, ಶಕುಂತಲಾ ಪಾಟೀಲ್, ತೈಯಬಾ, ಕನಕಮ್ಮ, ಶಾಂತಕುಮಾರಿ, ಕಮಲಾ ಇತರರಿದ್ದರು.