ನರಗುಂದ: ಸಮಾಜದಲ್ಲಿ ಪ್ರಚಲಿತದಲ್ಲಿರುವ ಸಾಂಸ್ಕೃತಿಕ ರೂಢಿಗಳಿಂದ ಲಿಂಗತ್ವದ ವ್ಯತ್ಯಾಸಗಳು ಉಂಟಾಗಿರಬಹುದು. ಲಿಂಗತ್ವ ಅಸಮಾನತೆ ತೊಡೆದು ಹಾಕುವುದು ಜವಾಬ್ದಾರಿಯುತ ನಾಗರಿಕರು ಮುಂದಾಗಬೇಕಿದೆ ಎಂದು ಬಿಇಒ ಡಾ. ಗುರುನಾಥ ಹೂಗಾರ ತಿಳಿಸಿದರು.
ನರಗುಂದ ತಾಪಂ ಭವನದಲ್ಲಿ ಗುರುವಾರ ತಾಲೂಕು ಮಟ್ಟದ ಲಿಂಗತ್ವ (ಜೆಂಡರ್) ವೇದಿಕೆ ರಚನೆ ಉದ್ದೇಶ ಮತ್ತು ಕಾರ್ಯಗಳ ಕುರಿತು ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಲಿಂಗ ಅಸಮಾನತೆಯು ಆರೋಗ್ಯ, ಶಿಕ್ಷಣ, ವ್ಯಾಪಾರ ಸೇರಿ ಅನೇಕ ಕ್ಷೇತ್ರಗಳಲ್ಲಿ ಮಹಿಳೆಯರನ್ನು ದುರ್ಬಲಗೊಳಿಸುತ್ತದೆ. ಲಿಂಗ ಅಸಮಾನತೆ ಮತ್ತು ತಾರತಮ್ಯದಿಂದ ಸಮಾಜದಲ್ಲಿ ಏರುಪೇರು ಉಂಟಾಗುತ್ತದೆ ಎಂದರು.
ಸಾಮಾಜಿಕ ರಕ್ಷಣೆಯಲ್ಲಿ ಅಭಿವೃದ್ಧಿಪಡಿಸುವ ಅಗತ್ಯವಿದೆ. ಮಹಿಳೆಯರಿಗೆ ಉದ್ಯೋಗ ಪಡೆಯಲು ಹೆಚ್ಚಿನ ಅವಕಾಶ ನೀಡಬೇಕಿದೆ. ಇತ್ತೀಚಿನ ದಿನಗಳಲ್ಲಿ ಜಾಗತಿಕವಾಗಿ ಹೆಚ್ಚುತ್ತಿರುವ ಲಿಂಗಾಧಾರಿತ ಹಿಂಸಾಚಾರದ ಬಗ್ಗೆ ಜಾಗೃತಿ ಮೂಡಿಸುವುದು, ಇತರ ಕ್ರಮ ಕೈಗೊಳ್ಳುವುದು, ಈ ನಿಟ್ಟಿನಲ್ಲಿ ನಾನಾ ಕಾರ್ಯ ಚಟುವಟಿಕೆ ಕೈಗೊಳ್ಳಲಾಗುತ್ತಿದೆ ಎಂದು ಹೂಗಾರ ತಿಳಿಸಿದರು.
ಲಿಂಗತ್ವ ಆಧಾರಿತ ದೌರ್ಜನ್ಯ ವಿರುದ್ಧ ರಾಷ್ಟ್ರೀಯ ಅಭಿಯಾನದ ಕುರಿತು ಸಭೆಯಲ್ಲಿ ಹೆಚ್ಚಿನ ಮಾಹಿತಿ ನೀಡಲಾಯಿತು. ಸಿಡಿಪಿಒ ಕಮಲಾ ಹುಲಕೋಟಿ, ಮೋಹನ ಕೃಷ್ಣಾ, ಕೆ.ಬಿ. ಹಾದಿಮನಿ. ಜಿ.ವಿ. ಕೊಣ್ಣೂರ, ತಾಲೂಕು ಆರೋಗ್ಯ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷರು, ಗ್ರಾಪಂ ಮಟ್ಟದ ಅಧ್ಯಕ್ಷರು, ಮುಖ್ಯ ಪುಸ್ತಕ ಬರಹಗಾರರು, ತಾಪಂ ಸಿಬ್ಬಂದಿ ಇದ್ದರು.