ಜನರಿಗೆ ತೊಂದರೆಯಾಗದಂತೆ ಕ್ರಮ ವಹಿಸಿ

oppo_0
oppo_0
Published on


ಬೈಲಕುಪ್ಪೆ : ಪಿರಿಯಾಪಟ್ಟಣ ತಾಲೂಕಿನ ಬೆಣಗಲು ಗ್ರಾಮದಲ್ಲಿ ಪುಣಸೆ ಕಟ್ಟೆ ಹಾಗೂ ಶಾಮಣ್ಣನ ಕೆರೆ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಸಚಿವ ಕೆ.ವೆಂಕಟೇಶ್ ಭೂಮಿ ಪೂಜೆ ನೆರವೇರಿಸಿದರು. ಈ ವೇಳೆ ಸಾರ್ವಜನಿಕರ ದೂರುಗಳನ್ನು ಆಲಿಸಿ, ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.


ಬೆಣಗಾಲು ಸ್ಮಶಾನ ಕಟ್ಟೆಗೆ ಹೋಗಲು ರಸ್ತೆ ಇಲ್ಲದೆ ತೊಂದರೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತುವರಿ ತೆರವುಗೊಳಿಸಿ ಎಂದು ಹಲವು ಬಾರಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಭಾಗದಲ್ಲಿ ರಾತ್ರಿ ವೇಳೆ ವಿದ್ಯುತ್ ಇಲ್ಲದೆ ಸಮಸ್ಯೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ, ಸಮಸ್ಯೆ ಪರಿಹರಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.


ಚೆನ್ನಕಲ್ ಕಾವಲ್ ಗ್ರಾಮದಲ್ಲಿ ಸರ್ವೇ ನಂಬರ್ 30 ರಲ್ಲಿ 4,000 ಎಕರೆ ಭೂಮಿ ಪೋಡಿಯಾಗಿಲ್ಲ. ಕೆಲವು ಪ್ರಭಾವಿಗಳು ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ. ಕೂಡಲೇ ಪೋಡಿ ಕಾರ್ಯ ಮಾಡಿಸಿಕೊಡಬೇಕು. ಬೆಣಗಾಲು ಬೋವಿ ಕಾಲನಿಯಲ್ಲಿ ನೀರಿಗೆ ತೊಂದರೆಯಾಗಿದೆ ಎಂದು ಸಚಿವರಲ್ಲಿ ದೂರಿದರು. ಗ್ರಾಮಸ್ಥರ ಮಾತನ್ನು ಆಲಿಸಿದ ಕೆ.ವೆಂಕಟೇಶ್, ಜನರ ಸಮಸ್ಯೆಗಳನ್ನು ಹಂತ, ಹಂತವಾಗಿ ಬಗೆಹರಿಸಲಾಗುವುದು. ಜನರಿಗೆ ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.


ಬೆಣಗಾಲು ಗ್ರಾಮ ಪಂಚಾಯತಿ ಅಧ್ಯಕ್ಷ ಸಿ.ಎಸ್.ಪ್ರಕಾಶ್, ಕೃಷ್ಣೆಗೌಡ, ತಹಸೀಲ್ದಾರ್ ನಿಸರ್ಗಪ್ರಿಯಾ, ಇಒ ಸುನಿಲ್ ಕುಮಾರ್. ಪಿಡಿಒ ಮಂಜುನಾಥ್, ವೃತ ನಿರೀಕ್ಷಕ ದೀಪಕ್, ವಿವಿಧ ಇಲಾಖೆ ಅಧಿಕಾರಿಗಳಾದ ಸೋಮಯ್ಯ, ಚಂದ್ರಶೇಖರ್, ಶಿವಕುಮಾರ್, ರವಿ ಪ್ರಸನ್ನ, ಆನಂದ್, ಮುಖಂಡರಾದ ರೆಹಮದ್ ಜಾನ್ ಬಾಬು, ಬುಜಂಗ, ಚೆನ್ನಕಲ್ ಶೇಖರ್, ಎಂ.ಬಿ.ಶಿವಕುಮಾರ್, ಅಸ್ಲಾಂಪಾಶ, ಧನರಾಜ್, ರಿಯಾಜ್, ಪುಟ್ಟರಾಜ್, ಯೋಗೇಶ್, ಅರವಿಂದರಾಜ ಅರಸ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net