ನಕಲಿ ವೈದ್ಯರ ಕಂಡುಬಂದರೆ ಕ್ರಮ ಕೈಗೊಳ್ಳಿ

ದೇವದುರ್ಗದ ಸಾರ್ವಜನಿಕ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ನಕಲಿ ವೈದ್ಯರ ತಡೆ ಕಾರ್ಯಪಡೆ ಸಮಿತಿ ಸಭೆಯಲ್ಲಿ ಟಿಎಚ್‌ಒ ಡಾ.ಬನದೇಶ್ವರ ಮಾತನಾಡಿದರು. ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಅರಕೇರಾ ತಹಸೀಲ್ದಾರ್ ಅಮರೇಶ ಬಿರಾದಾರ್, ಸಿಪಿಐ ಎನ್.ವೈ.ಗುಂಡೂರಾವ್, ಪಿಐ ಎಸ್.ಮಂಜುನಾಥ, ಟಿಎಚ್‌ಒ ಡಾ.ಬನದೇಶ್ವರ, ಐಎಂಎ ತಾಲೂಕು ಅಧ್ಯಕ್ಷ ಡಾ.ಎಚ್.ಎ.ನಾಡಗೌಡ ಇತರರಿದ್ದರು.
ದೇವದುರ್ಗದ ಸಾರ್ವಜನಿಕ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ನಕಲಿ ವೈದ್ಯರ ತಡೆ ಕಾರ್ಯಪಡೆ ಸಮಿತಿ ಸಭೆಯಲ್ಲಿ ಟಿಎಚ್‌ಒ ಡಾ.ಬನದೇಶ್ವರ ಮಾತನಾಡಿದರು. ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಅರಕೇರಾ ತಹಸೀಲ್ದಾರ್ ಅಮರೇಶ ಬಿರಾದಾರ್, ಸಿಪಿಐ ಎನ್.ವೈ.ಗುಂಡೂರಾವ್, ಪಿಐ ಎಸ್.ಮಂಜುನಾಥ, ಟಿಎಚ್‌ಒ ಡಾ.ಬನದೇಶ್ವರ, ಐಎಂಎ ತಾಲೂಕು ಅಧ್ಯಕ್ಷ ಡಾ.ಎಚ್.ಎ.ನಾಡಗೌಡ ಇತರರಿದ್ದರು.
Published on

ದೇವದುರ್ಗ: ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ಹಲವು ದೂರುಗಳು ಬಂದಿವೆ. ಆದ್ದರಿಂದ ಜಿಲ್ಲಾಧಿಕಾರಿ ನಿತೀಶ್ ಕುಮಾರ ನಕಲಿ ವೈದ್ಯರ ತಡೆ ಕಾರ್ಯಪಡೆ ಸಮಿತಿ ರಚಿಸಿದ್ದು, ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಎಂದು ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನಕಲಿ ವೈದ್ಯರ ತಡೆ ಕಾರ್ಯಪಡೆ ಸಮಿತಿ ಸಭೆಯಲ್ಲಿ ಮಾತನಾಡಿದರು. ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಕಾರ್ಯಪಡೆ ಸಮಿತಿ ಸದಸ್ಯರು ತಾಲೂಕಿನ ವಿವಿಧ ಖಾಸಗಿ ಆಸ್ಪತ್ರೆ, ಲ್ಯಾಬ್, ಕ್ಲಿನಿಕ್, ನರ್ಸಿಂಗ್ ಹೋಮ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಕೆಪಿಎಂಇ ಕಾಯ್ದೆಯಡಿ ನೋಂದಾಯಿತ ಆಸ್ಪತ್ರೆಗಳಿಗೆ ಭೇಟಿ ನೀಡಿ ದಾಖಲೆ ಪರಿಶೀಲಿಸಬೇಕು. ಪ್ರತಿ ಬಾರಿ 10 ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸಾ ಪದ್ಧತಿ, ವೈದ್ಯರ ಪದವಿ ಪ್ರಕಾರ ಔಷಧ ಹಾಗೂ ಚಿಕಿತ್ಸೆ ನೀಡುತ್ತಿದ್ದಾರೆಯೇ ಎನ್ನುವ ಕುರಿತು ಪರಿಶೀಲಿಸಬೇಕು. ಸಂಗ್ರಹಿಸಿದ ಮಾಹಿತಿಯನ್ನು ತಾಲೂಕು ಐಎಂಎ ಅಧ್ಯಕ್ಷರು, ತಾಲೂಕು ಎಎಫ್‌ಐ ಅಧ್ಯಕ್ಷರು ಹಾಗೂ ಪೊಲೀಸ್ ವೃತ್ತ ನಿರೀಕ್ಷಕರ ತಂಡ ಪರಿಶೀಲನೆ ಮಾಡಬೇಕು. ಲೋಪ ಕಂಡುಬಂದರೆ ತಕ್ಷಣ ನೋಟಿಸ್ ನೀಡಬೇಕು. ಗ್ರಾಮೀಣ ಭಾಗ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ನಕಲಿ ವೈದ್ಯರು ಕಂಡುಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಾರ್ಯಪಡೆ ಸಮಿತಿ ಸರಿಯಾಗಿ ಕೆಲಸ ನಿರ್ವಹಿಸಿ ಸಾರ್ವಜನಿಕರ ಗುಣಮಟ್ಟದ ಆರೋಗ್ಯಕ್ಕೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ಅರಕೇರಾ ತಹಸೀಲ್ದಾರ್ ಅಮರೇಶ ಬಿರಾದಾರ್, ಸಿಪಿಐ ಎನ್.ವೈ.ಗುಂಡೂರಾವ್, ಪಿಐ ಎಸ್.ಮಂಜುನಾಥ, ಟಿಎಚ್‌ಒ ಡಾ.ಬನದೇಶ್ವರ, ಐಎಂಎ ತಾಲೂಕು ಅಧ್ಯಕ್ಷ ಡಾ.ಎಚ್.ಎ.ನಾಡಗೌಡ, ಎಎಫ್‌ಐ ಅಧ್ಯಕ್ಷ ಡಾ.ಬಸವರಾಜರೆಡ್ಡಿ, ಪ್ರಮುಖರಾದ ಸಂತೋಷ, ಶಿವಪ್ಪ ಭೂಮನಗುಂಡ, ಚನ್ನಬಸಯ್ಯ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net