

ಬಾದಾಮಿ: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾ.21ರಿಂದ ಏ.4 ರವರೆಗೆ ಜರುಗಲಿದ್ದು, ಪರೀಕ್ಷೆ ಸಮಯದಲ್ಲಿ ಯಾವುದೇ ಅಕ್ರಮಗಳಿಗೆ ಅವಕಾಶ ನೀಡದೆ ಪಾರದರ್ಶಕ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ್ ಮಧುರಾಜ್ ತಿಳಿಸಿದರು.
ತಹಸೀಲ್ದಾರ್ ಕಚೇರಿಯ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ 15 ಪರೀಕ್ಷಾ ಕೇಂದ್ರಗಳಲ್ಲಿ 5586 ಅಭ್ಯರ್ಥಿಗಳು ಪರೀಕ್ಷೆ ನೋಂದಣಿ ಮಾಡಿಕೊಂಡಿದ್ದಾರೆ. ಪರೀಕ್ಷಾ ಕಾರ್ಯಕ್ಕೆ 15 ಮುಖ್ಯಅಧಿಕ್ಷಕರು, 9 ಉಪಅಧಿಕ್ಷಕರು, 15 ಅಭಿರಕ್ಷಕರು, 15 ಪರೀಕ್ಷಾ ಕೇಂದ್ರದ ವೀಕ್ಷಕರು, 15 ವೆಬ್ ಕಾಸ್ಟಿಂಗ್ ಸಿಬ್ಬಂದಿ, 15 ಮೊಬೈಲ್ ಸ್ವಾಧೀನಾಧಿಕಾರಿ, 15 ಸ್ಥಾನಿಕ ಜಾಗೃತ ದಳದವರು, 5 ಮಾರ್ಗಾಧಿಕಾರಿಗಳು ಮತ್ತು 180 ಕ್ಕೂ ಅಧಿಕ ಕೊಠಡಿ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ತಾಲೂಕಿನಲ್ಲಿ 4 ್ಲಾಯಿಂಗ್ ಸ್ಕ್ವಾಡ್ ತಂಡಗಳನ್ನು ರಚಿಸಲಾಗಿದೆ. ಪರೀಕ್ಷಾ ಕೇಂದ್ರದಿಂದ 200 ಮೀಟರ್ ವ್ಯಾಪ್ತಿಯಲ್ಲಿ 144 ಕಲಂ ಜಾರಿಗೊಳಿಸುವುದರ ಮೂಲಕ ಶಿಸ್ತುಬದ್ಧವಾಗಿ ಪರೀಕ್ಷೆ ನಡೆಸಲಾಗುವುದು ಎಂದರು.
ಸಭೆಯಲ್ಲಿ ಬಿಇಒ ಕೇಶವ ಪೆಟ್ಲೂರ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ. ದೊಡ್ಡಪ್ಪನ್ನವರ, ಸಿಪಿಐ ಕರೆಪ್ಪ ಬನ್ನೆ, ಪಿಎಸ್‌ಐ ವಿಠ್ಠಲ ನಾಯಕ, ಉಪತಹಸೀಲ್ದಾರ್ ಎಸ್.ಬಿ.ಬೊಮ್ಮನ್ನವರ, ಖಜಾನೆ ಅಧಿಕಾರಿ ಸಾರಂಗಮಠ, ಉಪಪ್ರಾಚಾರ್ಯ ಎಂ.ಪಿ. ಮಾಗಿ, ನೋಡಲ್ ಅಧಿಕಾರಿ ಬಿ.ಕೆ.ಚಿಮಲ್ ಮತ್ತಿತರರಿದ್ದರು.