

ಚಿತ್ರದುರ್ಗ: ಸುಪ್ರಿಂಕೋರ್ಟ್ ನಿರ್ದೇಶನದನ್ವಯ ಅನಾಥ,ನಿರ್ಗತಿಕ ಮಗು ಯಾವುದೇ ಯೋಜನೆ ಸೌಲಭ್ಯ ಪಡೆಯಲು ಆಧಾರ್‌ಕಾರ್ಡ್ ಅ ಗತ್ಯವಿರುತ್ತದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ರೋಣ್‌ವಾಸುದೇವ ಅವರು ಹೇಳಿದರು.ನಿರ್ಗತಿಕ ಮತ್ತು ಅಲೆಮಾ ರಿ ಮಕ್ಕಳ ಆಧಾರ್ ನೋಂದಣಿ ಹಾಗೂ ಅವರಿಗೆ ಸರ್ಕಾರಿ ಸೌಲಭ್ಯ ಒದಗಿಸುವ‘ಸಾಥಿ ಅಭಿಯಾ ನ’ಕ್ಕೆ ಸೋಮವಾರ ನಗರದ ಜಿಲ್ಲಾ ಬಾಲಭವನದಲ್ಲಿ ಚಾಲನೆ ನೀಡಿ ಮಾತನಾಡಿ,ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳು ಕಾರ್ಯೋನ್ಮುಖವಾಗಿ ಆಧಾರ್ ನೋಂದಣಿ ಹಾ ಗೂ ಕಾರ್ಡ್ ವಿತರಣೆಗೆ ಕ್ರಮ ವಹಿಸ ಬೇಕೆಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್.ವಿಜಯಕುಮಾರ್ ಮಾತನಾಡಿ,6 ತಿಂಗಳಿಂದ ಆರು ವರ್ಷ ದವರೆಗೆ ಅಂಗನವಾಡಿ ಮಕ್ಕಳಿಗೆ ಐಸಿಡಿಎಸ್ ಯೋಜನೆಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಗರ್ಭಿಣಿ, ಬಾಣಂತಿಯರು ಕಡ್ಡಾಯ ವಾಗಿ ಆಧಾರ್‌ಕಾರ್ಡ್ ನೀಡಿ ಸೌಲಭ್ಯ ಪಡೆಯುತ್ತಿದ್ದಾರೆ. ಪೋಷಣ್ ಟ್ರಾೃಕ್‌ನಲ್ಲಿ ಆಧಾರ್‌ನೊಂದಿಗೆ ನೊಂದಣಿ ಮಾಡುತ್ತಿದ್ದು, ಸರ್ಕಾ ರಿ ಸೌಲಭ್ಯಗಳಿಂದ ವಂಚಿತರಾಗದಿರಲು ಕಡ್ಡಾಯವಾಗಿ ಆಧಾರ್‌ಕಾರ್ಡ್ ಪಡೆಯ ಬೇಕೆಂದರು.
ಹಿರಿಯ ಸಿವಿಲ್ ನ್ಯಾಯಾಧೀಶ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ‌್ಯದರ್ಶಿ ಎಂ.ವಿಜಯ್,ಡಿಡಿಪಿಐ ಎಂ.ಆರ್. ಮಂಜುನಾಥ್,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಡಿ.ಮಂಜುನಾಥ್,ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎ.ಎಂ.ವೀಣಾ,ಆಪ್ತ ಸಮಾಲೋಚಕ ರಂಗನಾಥ್,ಆಧಾರ್‌ಕಾರ್ಡ್ ನೋಂದಣಿದಾರ ವೆಂಕಟೇಶ್ ಮತ್ತಿತರರು ಇದ್ದರು.