

ಹರಪನಹಳ್ಳಿ: ಗ್ರಾಮಗಳಲ್ಲಿ ಚರಂಡಿ ವ್ಯವಸ್ಥೆ, ನಿವೇಶನಗಳ ನಿರ್ಮಾಣ ಸೇರಿ ಜನರ ಸಮಸ್ಯೆಗಳನ್ನು ಶೀಘ್ರವೇ ಸ್ಪಂದಿಸಬೇಕು ಎಂದು ಜಿಪಂ ಉಪಕಾರ್ಯದರ್ಶಿ ಭೀಮಪ್ಪ ಲಾಳಿ ತಿಳಿಸಿದರು.
ತಾಲೂಕಿನ ಅರಸೀಕೆರೆ ಗ್ರಾಪಂ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಜಮಾಬಂದಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮುಖ್ಯವಾಗಿ ರಸ್ತೆ ನಿರ್ಮಾಣ, ದಿನವಹಿ ಸಂತೆ, ಆಟದ ಮೈದಾನ, ಕಸ ವಿಲೇವಾರಿ ಘಟಕ, ವಾಹನದ ವ್ಯವಸ್ಥೆ ಹಾಗೂ 7.68 ಎಕರೆಯಲ್ಲಿ ಆಶ್ರಯ ಮನೆಗಳ ನಿರ್ಮಾಣ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪ್ರಮುಖರಾದ ಮಂಜುನಾಥ, ಮಹಾಂತೇಶ್, ತಾಂತ್ರಿಕ ಸಂಯೋಜಕ ನಾಗರಾಜ್ ನಾಯ್ಕ, ಷಣ್ಮುಖಪ್ಪ, ಸಿ ನಾಗರಾಜ ಇತರರಿದ್ದರು.