

ರಾಯಚೂರು: ಶೈಕ್ಷಣಿಕ ವರ್ಷದ ಆರಂಭಕ್ಕೆ ಮುಂಚೆಯೇ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಸೇವೆಯನ್ನು ವರ್ಷವೀಡಿ ಪರಿಗಣಿಸಬೇಕು ಎಂದು ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರ ಸಂಘ ಒತ್ತಾಯಿಸಿದೆ.
ಸಂಘದ ನಿಯೋಗ ಕ್ಷೇತ್ರ ಶಿಕ್ಷಣಾಕಾರಿ ಚಂದ್ರಶೇಖರ ಭಂಡಾರಿಗೆ ಮನವಿ ಸಲ್ಲಿಸಿ, ಪ್ರತಿ ವರ್ಷ ಶೈಕ್ಷಣಿಕ ವರ್ಷ ಆರಂಭವಾದ ಬಹುದಿನಗಳ ನಂತರದಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆರಂಭದಲ್ಲಿಯೇ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂದು ಆಗ್ರಹಿಸಿದರು.
ತಾಲೂಕಿನಲ್ಲಿ ಸಾವಿರಾರೂ ಶಿಕ್ಷಕರ ಕೊರತೆಯಿದ್ದು, ಮಕ್ಕಳ ಹಿತದೃಷ್ಟಿಯಿಂದ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡಲ್ಲಿ ಬೋಧನೆಗೆ ಅನುಕೂಲವಾಗಲಿದೆ. ಸೇವೆಯನ್ನು ವರ್ಷವೀಡಿ ಪರಿಗಣಿಸಿ ಸಮಯಕ್ಕೆ ಸರಿಯಾಗಿ ಗೌರವಧನ ಪಾವತಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಸಂಘದ ಅಧ್ಯಕ್ಷ ನರಸಿಂಹ ಮಲಯಾಬಾದ್, ಗೌರವಾಧ್ಯಕ್ಷ ಲಕ್ಷ್ಮಿ ನಾಯಕ, ಪದಾಕಾರಿಗಳಾದ ಪ್ರಶಾಂತ, ಸಾಕ್, ರವಿ, ತಿಮ್ಮಪ್ಪ ಅನ್ವರ್, ಭೀಮಣ್ಣ, ಮಲ್ಲಿಕಾರ್ಜುನ ಇದ್ದರು.