ಪರವಾನಗಿ ಇಲ್ಲದ ವ್ಯಾಪಾರಿಗಳ ವಿರುದ್ಧ ಕ್ರಮವಹಿಸಿ

10 kudlagi 02
ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಎಪಿಎಂಸಿ ಅಧ್ಯಕ್ಷ ಕುರಿಹಟ್ಟಿ ಬೋಸಯ್ಯ ಹಾಗೂ ಕಾರ್ಯದರ್ಶಿ ಎಸ್.ಸಿ.ಬಸವರಾಜಗೆ ಮನವಿ ಸಲ್ಲಿಸಿದರು. ಕರವೇ ತಾಲೂಕು ಅಧ್ಯಕ್ಷ ಕಾಟೇರ್ ಹಾಲೇಶ್, ಸೂರ್ಯಪಾಪಣ್ಣ, ಎಚ್.ರೇವಣ್ಣ, ಮಹೇಶ, ಲಕ್ಷ್ಮೀದೇವಿ, ಕಾಟೇರ ರಮೇಶ, ವೆಂಕಟೇಶ ಇತರರಿದ್ದರು.
Published on

ಕೂಡ್ಲಿಗಿ: ಎಪಿಎಂಸಿಯಲ್ಲಿ ರೈತರ ಉತ್ಪನ್ನಗಳಲ್ಲಿ ಬಾಜು ತೆಗೆಯುವುದು, ತೂಕದಲ್ಲಿ ವ್ಯತ್ಯಾಸ ಮಾಡುವುದನ್ನು ತಡೆಯಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣ ವೇದಿಕೆ ಕಾರ್ಯಕರ್ತರು ಶುಕ್ರವಾರ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಬಸವರಾಜಗೆ ಮನವಿ ಸಲ್ಲಿಸಿದರು.

ವ್ಯಾಪಾರಿಗಳು ತೂಕದಲ್ಲಿ ವ್ಯತ್ಯಾಸ ಮಾಡಿ ಕ್ವಿಂಟಾಲ್‌ಗೆ 4 ಕೆಜಿ ಬಾಜು ತೆಗೆದು ಮೋಸ ಮಾಡುತ್ತಿದ್ದಾರೆ. ತಾಲೂಕು ಕೇಂದ್ರ ಸ್ಥಾನದಲ್ಲಿ ಎಪಿಎಂಸಿ ಇದ್ದರೂ ದಲ್ಲಾಳಿ ಅಂಗಡಿ ಮಾಲೀಕರು ಅಂಗಡಿಗಳನ್ನು ತೆರೆಯದೆ ರೈತರಿದ್ದಲ್ಲಿಗೆ ಹೋಗಿ ಕಾಳುಗಳನ್ನು ತೂಕ ಮಾಡಿಕೊಂಡು ಬರುತ್ತಿದ್ದಾರೆ. ಎಪಿಎಂಸಿಗೆ ಬಂದು ಉತ್ಪನ್ನಗಳನ್ನು ಮಾರಾಟ ಮಾಡುವಂತೆ ರೈತರಲ್ಲಿ ಜಾಗೃತಿ ಮೂಡಿಸಬೇಕು. ಮೋಸ ಮಾಡುವ ದಲ್ಲಾಳಿ ಅಂಗಡಿಗಳ ಪರವಾನಗಿ ಶಾಶ್ವತವಾಗಿ ರದ್ದುಪಡಿಸಬೇಕು. ಪರವಾನಗಿ ಇಲ್ಲದೆ ವ್ಯಾಪಾರ ಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೂ ಮೊದಲು ಗಾಂಧಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕದಿಂದ ಹೊರಟ ಪ್ರತಿಭಟನಾ ಮೆರವಣಿಗೆಗೆ ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. ಈ.ರಮೇಶ, ಮೆಹಬೂಬ್ ಬಾಷಾ, ನಾಗರಾಜ, ಸಾಲುಮನಿ ರಾಘವೇಂದ್ರ, ಓಬಳೇಶ, ಕಾಶೀನಾಥ, ಮಹಾರಾಜ, ಲಕ್ಷ್ಮೀದೇವಿ, ಮಹೇಶ, ಶಿವಕುಮಾರ್, ಮಾಜಿ ಸೈನಿಕ ರಮೇಶ, ಕಕ್ಕುಪಿ ಬಸವರಾಜ, ಎನ್.ಅಜೇಯ, ನಿರ್ಕಲ್ ನಿಂಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net