ಜಾಹೀರಾತಿನಲ್ಲಿ ಕನ್ನಡ ರ್ನಿಲಸಿದವರ ವಿರುದ್ಧ ಕ್ರಮ ಜರುಗಿಸಿ

Untitled-4
ದೊಡ್ಡಬಳ್ಳಾಪುರದ ಹೋರ್ಡಿಂಗ್ಸ್​ಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡುವಂತೆ ಒತ್ತಾಯಿಸಿ ಕರವೇ ಮುಖಂಡರು ಪೌರಾಯುಕ್ತ ಕಾರ್ತಿಕ್​ ಈಶ್ವರ್​ ಅವರಿಗೆ ಮನವಿ ಸಲ್ಲಿಸಿದರು. ಮುಖಂಡರಾದ ಮುನಿರಾಜು, ಸುಬ್ರಹ್ಮಣಿ, ಮೋಹನ್​ ಕುಮಾರ್​ ,ಆನಂದ್​ ಮೂರ್ತಿ, ಹಮೀದ್​ ಇದ್ದರು.
Published on

ದೊಡ್ಡಬಳ್ಳಾಪುರ : ನಗರಸಭೆ ವ್ಯಾಪ್ತಿಯ ಹೋರ್ಡಿಂಗ್ಸ್​ಗಳಲ್ಲಿ ಸಂಪೂರ್ಣ ಕನ್ನಡ ರ್ನಿಲಸಿರುವ ಕುರಿತು ಕಠಿಣ ಕ್ರಮಕ್ಕೆ ಒತ್ತಾಯಿಸಿ ನಗರಸಭೆ ಪೌರಾಯುಕ್ತ ಕಾರ್ತಿಕ್​ ಈಶ್ವರ್​ಗೆ ಕರವೇ (ಪ್ರವಿಣ್ವಶೆಟ್ಟಿ ಬಣ)ದಿಂದ ಗುರುವಾರ ಮನವಿ ಸಲ್ಲಿಸಿದರು.

ಕರವೇ ಪ್ರಧಾನ ಕಾರ್ಯದರ್ಶಿ ರಾಜಟ್ಟ ರವಿ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಹಲವು ಹೋರ್ಡಿಂಗ್​ಗಳಿದ್ದು, ಪ್ರದರ್ಶಿಸುವ ಜಾಹೀರಾತುಗಳಲ್ಲಿ ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ರ್ನಿಲಸಲಾಗಿದೆ. ಫಲಕದ ತುಂಬಾ ಆಂಗ್ಲ ಭಾಷೆ ರಾರಾಜಿಸುತ್ತಿರುತ್ತದೆ. ಕೆಲವು ಫಲಕಗಳಲ್ಲಿ ಅಶ್ಲೀಲ ಚಿತ್ರಗಳು ಸಾರ್ವಜನಿಕರಿಗೆ, ಮಹಿಳೆಯರಿಗೆ ತೀವ್ರ ಮುಜುಗರ ತರಿಸುವಂತಿರುತ್ತವೆ. ಮಹಿಳೆಯರು ಓಡಾಡಲು ಸಹ ಮುಜುಗರವಾಗುತ್ತದೆ. ಹೀಗಾಗಿ ನಗರಸಭೆ ಈ ಕೂಡಲೇ ಸಂಬಂಧಪಟ್ಟ ಫಲಕಗಳ ಮಾಲೀಕರಿಗೆ ತುರ್ತು ಸಭೆ ನಡೆಸಿ ಕಡ್ಡಾಯವಾಗಿ ಕನ್ನಡ ಭಾಷೆ ಹಾಗೂ ಅಶ್ಲೀಲವೆನಿಸುವ ಜಾಹೀರಾತುಗಳಿಗೆ ಸಂಬಂಧಿಸಿದಂತೆ ನಿಯಮ ಪಾಲಿಸಲು ಆದೇಶಿಸಬೇಕು.

ಕನ್ನಡ ಬಾಷೆ ರ್ನಿಲಸಿರುವ ಜಾಹೀರಾತುಗಳನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ಕರವೇ ನೇರ ಕಾರ್ಯಾಚರಣೆಯ ಮೂಲಕ ತೆರವುಗೊಳಿಸುತ್ತದೆ. ನಂತರದ ಯಾವುದೇ ಪರಿಣಾಮಗಳಿಗೂ ನಗರಸಭೆಯೇ ನೇರ ಹೊಣೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net