ಪ್ರಚೋದನಾಕಾರಿ ಹೇಳಿಕೆ ನೀಡಿರುವವರ ವಿರುದ್ಧ ಕ್ರಮ ವಹಿಸಿ

12kglphoto-1, (1)
ಸರ್ಕಾರಿ ಜಾರಿ ನಿಯಮ ಕಾವಲು ಸಮಿತಿ ಪದಾಧಿಕಾರಿಗಳು ಕೊಳ್ಳೇಗಾಲದಲ್ಲಿ ಎಸ್‌ಐ ಮಹೇಶ್ ಕುಮಾರ್ ಅವರಿಗೆ ದೂರು ಸಲ್ಲಿಸಿದರು. ಎಲ್.ನಾಗಣ್ಣ, ಉಪಾಧ್ಯಕ್ಷ ಸೋಮನಾಥ್, ರಮೇಶ್, ಮುಳ್ಳೂರು ಕಮಲ್, ಶಿವಮೂರ್ತಿ ನಾಯಕ, ಲಿಂಗಣ್ಣ ಇದ್ದರು.
Published on

ಕೊಳ್ಳೇಗಾಲ: ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಫೇಸ್‌ಬುಕ್ ಲೈವ್‌ನಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿರುವ ಅಯೋಧ್ಯೆ ಅರ್ಚಕ ಪರಮಹಂಸ ಆಚಾರ್ಯ ಹಾಗೂ ಅವರ ನಾಲ್ವರು ಸಹಚರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರಿ ಜಾರಿ ನಿಯಮ ಕಾವಲು ಸಮಿತಿ ಪದಾಧಿಕಾರಿಗಳು ಪಟ್ಟಣದ ಆರಕ್ಷಕ ಉಪನಿರೀಕ್ಷಕ ಮಹೇಶ್ ಕುಮಾರ್ ಅವರಿಗೆ ಮಂಗಳವಾರ ದೂರು ಸಲ್ಲಿಸಿದರು.

ಸಚಿವ ಉದಯನಿಧಿ ಸ್ಟಾಲಿನ್ ಕಾರ್ಯಕ್ರಮವೊಂದರಲ್ಲಿ ಸನಾತನ ಧರ್ಮ ಕುರಿತು ನೀಡಿದ್ದ ಹೇಳಿಕೆ ವಿರುದ್ಧ ಸೆ.6ರಂದು ಅಯೋಧ್ಯೆ ಅರ್ಚಕ ಪರಮಹಂಸ ಆಚಾರ್ಯರು ಹಾಗೂ ನಾಲ್ವರು ಸಹಚರರು, ಸ್ಟಾಲಿನ್ ಅವರ ತಲೆಯನ್ನು ನಾನೇ ಕಡಿಯುತ್ತೇನೆ. ಇಲ್ಲವೇ ಯಾರಾದರೂ ಅವನ ತಲೆಯನ್ನು ಕಡಿದು ತಂದವರಿಗೆ 10 ಕೋಟಿ ರೂ. ನೀಡುವುದಾಗಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ಅಶಾಂತಿಗೆ ಕಾರಣವಾಗಿದೆ. ಸೆ. 9ರಂದು ಇದೇ ಹೇಳಿಕೆಯನ್ನು ಪುನರುಚ್ಚರಿಸಿ ಕ್ರಾಂತಿಗೆ ಕುಮ್ಮಕ್ಕು ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಸಮಿತಿ ಅಧ್ಯಕ್ಷ ಎಲ್.ನಾಗಣ್ಣ, ಉಪಾಧ್ಯಕ್ಷ ಸೋಮನಾಥ್, ರಮೇಶ್, ಮುಳ್ಳೂರು ಕಮಲ್, ಶಿವಮೂರ್ತಿ ನಾಯಕ, ಡಿಎಎಸ್ ಜಿಲ್ಲಾಧ್ಯಕ್ಷ ಲಿಂಗಣ್ಣ ಉತ್ತಂಬಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net