ರಿಕ್ಕಿ ರೈ ಮೇಲೆ ದಾಳಿಗೈದವರ ವಿರುದ್ಧ ಕ್ರಮವಹಿಸಿ

Dvd Manavi
ದೇವದುರ್ಗದಲ್ಲಿ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿಗೆ ಜಯ ಕರ್ನಾಟಕ ಸಂಘಟನೆ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ಯಲ್ಲಗೌಡ ಕೆ.ಇರಬಗೇರಾ, ಮುಖಂಡರಾದ ಹೇಮರೆಡ್ಡಿ ಜಾಧವ್, ರಂಗು ನಾಯಕ ಚಿಕ್ಕಗುಡ್ಡ, ಸಾಬಗೌಡ, ಹನುಮಂತ್ರಾಯ, ಮಲ್ಲಪ್ಪ ಬೆಣಕಲ್, ಶಿವಕುಮಾರ ಹಿರೇಮಠ, ಶಂಕರ ಗುತ್ತೇದಾರ್, ಅಮರೇಶ ಚವ್ಹಾಣ್ ಇದ್ದರು.
Published on

ದೇವದುರ್ಗ: ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ದುಷ್ಕರ್ಮಿಗಳ ದಾಳಿ ಖಂಡಿಸಿ ಪಟ್ಟಣದ ತಾಲೂಕು ಆಡಳಿತಸೌಧ ಮುಂದೆ ಸಂಘಟನೆಯ ಸ್ಥಳೀಯ ಮುಖಂಡರು ಬುಧವಾರ ಪ್ರತಿಭಟನೆ ನಡೆಸಿದರು.

ನಾಡು, ನುಡಿಗಾಗಿ ಸಂಘಟನೆ ಕಟ್ಟಿ ಹೋರಾಟದ ರೂಪುರೇಷೆ ನೀಡಿದ್ದ ಮುತ್ತಪ್ಪ ರೈ ಅವರ ಮಗ ರಿಕ್ಕಿ ರೈ ಮೇಲೆ ದುಷ್ಕರ್ಮಿಗಳು ಮನಸೋಇಚ್ಛೆ ದಾಳಿ ನಡೆಸಿದ್ದು ಖಂಡನೀಯ. ದಾಳಿಯಲ್ಲಿ ರಿಕ್ಕಿ ರೈ ತೀವ್ರವಾಗಿ ಗಾಯಗೊಂಡಿದ್ದಾರೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು. ತಪ್ಪಿತಸ್ಥರನ್ನು ಬಂಧಿಸಿ ಕಾನೂನುಕ್ರಮ ಕೈಗೊಳ್ಳಬೇಕು.

ರಿಕ್ಕಿ ರೈ ಕುಟುಂಬಕ್ಕೆ ರಕ್ಷಣೆ ನೀಡಬೇಕು. ಮುಂದೆ ಇಂಥ ಘಟನೆಗಳು ನಡೆಯದಂತೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಯಲ್ಲಗೌಡ ಆಕಳಕುಂಪಿ, ಕೆ.ಸುನೀಲ್‌ಕುಮಾರ, ಜುಬೇರ್, ಮನೋಹರ್ ಕಾಂಬ್ಳೆಕರ್, ಸಂಗು ಕಲ್ಲೂರು, ಬಸವರಾಜ ಸುಣ್ಣದಕಲ್, ಮಾಧವರಾವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net