

ಮಸ್ಕಿ: ತಲೇಖಾನ್ ಗ್ರಾಪಂ ವಸತಿ ಯೋಜನೆಯಡಿ ಅರ್ಹರಿಗೆ ಮನೆ ಹಂಚಿಕೆ ಮಾಡದೆ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪಂಚಾಯಿತಿ ವ್ಯಾಪ್ತಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ:ಲ್ಯಾಪ್ಟಾಪ್ ಖರೀದಿ ಅವ್ಯವಹಾರ ತನಿಖೆಯಾಗಲಿ
ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ಪ್ರತಾಪಗೌಡ ಪಟೀಲ್ ಮಾತನಾಡಿ, ತಲೇಖಾನ್ ಗ್ರಾಪಂಗೆ 2024-25ನೇ ಸಾಲಿನಲ್ಲಿ 260 ಮನೆಗಳು ಮಂಜೂರಾಗಿವೆ. ಆದರೆ, ಅರ್ಹರಿಗೆ ಮನೆ ವಿತರಣೆ ಮಾಡದೆ ಗ್ರಾಪಂ ಅಧ್ಯಕ್ಷೆ ಹಾಗೂ ಪಿಡಿಒ ಅವ್ಯವಹಾರ ಮಾಡಿದ್ದಾರೆ. ಆದ್ದರಿಂದ ತಾಪಂ ಇಒ ಕೂಡಲೇ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗ್ರಾಮ ಸಭೆ, ವಾರ್ಡ್ ಸಭೆ ನಡೆಸಿಲ್ಲ. ನೋಡಲ್ ಅಧಿಕಾರಿಯನ್ನು ನೇಮಿಸಿಲ್ಲ. ಗ್ರಾಪಂ ಅಧ್ಯಕ್ಷೆ ಹಾಗೂ ಪಿಡಿಒ ಹಣ ಕೊಟ್ಟವರಿಗೆ ಮನೆ ಹಂಚಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಕೂಡಲೇ ಅರ್ಹ ಫಲಾನುಭವಿಗಳಿಗೆ ಮನೆ ವಿತರಿಸಬೇಕು. ಅಕ್ರಮ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಶರಣಯ್ಯ ಸೊಪ್ಪಿಮಠ, ಮಸ್ಕಿ ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ತಲೇಖಾನ್ ಗ್ರಾಪಂ ಸದಸ್ಯ ಮೌನೇಶ ರಾಠೋಡ, ಪ್ರಮುಖರಾದ ಮೌನೇಶ ನಾಯಕ, ಶ್ರೀನಿವಾಸ, ಲಿಂಗಪ್ಪ ಚವ್ಹಾಣ್ ಇತರರಿದ್ದರು.