ಅಪಪ್ರಚಾರ ವಿರುದ್ಧ ಕ್ರಮಕೈಗೊಳ್ಳಿ

FotoJet
Published on

ತುರುವೇಕೆರೆ: ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುತ್ತಿರುವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಧರ್ಮಸ್ಥಳ ಭಕ್ತ ವೃಂದಿಂದ ಪಟ್ಟಣದಲ್ಲಿ ಪ್ರತಿಭಟನೆ ಹಾಗೂ ಸ್ವಯಂ ಪ್ರೇರಿತ ಬಂದ್​ ಆಚರಿಸಲಾಯಿತು.

ಬಿಜೆಪಿ ಮುಖಂಡ ಚಂದ್ರಶೇಖರ್​ ಮಾತನಾಡಿ, ಸನಾತನ ಹಿಂದು ಧರ್ಮವನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಹಿಂದು ಧರ್ಮವು 10 ಸಾವಿರ ವರ್ಷಗಳಿಂದ ನಡೆದುಕೊಂಡು ಬಂದಿದೆ. ದುಷ್ಟಶಕ್ತಿಗಳು ದೇಶವನ್ನು ವಿಭಜಿಸಲು ಹುನ್ನಾರ ನಡೆಸುತ್ತಿವೆ. ಭಾರತದ ಶಕ್ತಿಯನ್ನು ವಿರೋಧಿ ದೇಶಗಳಿಗೆ ಸಹಿಸಲು ಆಗುತ್ತಿಲ್ಲ. ವಿದೇಶಿ ಶಕ್ತಿಗಳು ನಮ್ಮಲ್ಲಿರುವ ರಾಕ್ಷಸ ಪ್ರವೃತ್ತಿ ಉಳ್ಳವರ ನೆರವನ್ನು ಪಡೆದು ಈ ರೀತಿಯ ದುಷತ್ಯ ಮಾಡುತ್ತಲೇ ಬರುತ್ತಿದ್ದಾರೆ. ಈ ಹಿಂದೆ ಶಬರಿಮಲೆ ದೇವಸ್ಥಾನ, ತಿರುಪತಿ, ನಂಜನಗೂಡು ಮುಂತಾದ ಧಾರ್ಮಿಕ ಕೇಂದ್ರಗಳಿಗೆ ಧಕ್ಕೆ ತರುವಂತಹ ಅಪಪ್ರಚಾರದಲ್ಲಿ ತೊಡಗಿದ್ದರು. ಈಗ ಧರ್ಮಸ್ಥಳದ ಮೇಲೆ ಅಪಪ್ರಚಾರ ಮಾಡಲಾಗುತ್ತಿದೆ ಎಂದರು.

ಪ್ರತಿಭಟನೆ ಹಿನ್ನೆಲೆ ಪಟ್ಟಣದಲ್ಲಿ ಕೆಲವು ವ್ಯಾಪಾರಿಗಳು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬೆಂಬಲ ಸೂಚಿಸಿದರು. ನಂತರ ಪ್ರತಿಭಟನಕಾರರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಬಾಣಸಂದ್ರ ಸರ್ಕಲ್​ನಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ರಸ್ತೆ ಬಂದ್​ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರಾದ ಕನ್ನಡ ಕಂದ ವೆಂಕಟೇಶ್​, ಧನಂಜಯ, ಮುನಿಯಪ್ಪ, ಜಯಲಕ್ಷ$್ಮಮ್ಮ, ರೇಣುಕೇಶ್​, ರಾಕೇಂದು, ಗೌರೀಶ್​ ಹಟ್ಟಿಹಳ್ಳಿ, ಯೋಜನಾಧಿಕಾರಿಗಳಾದ ಶಾಲಿನಿ ಶೇಖರ್​ ಶೆಟ್ಟಿ, ಚಂದನಾ, ಶಂಕರಪ್ಪ, ರವಿ, ಶಿವರಾಜ್​ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net