ಖಾಸಗಿ ಶಾಲೆಗಳ ವಿರುದ್ಧ ಕ್ರಮಕೈಗೊಳ್ಳಿ

08-LNG-01
ಲಿಂಗಸುಗೂರಿನಲ್ಲಿ ಬಿಇಒ ಹುಂಬಣ್ಣ ರಾಠೋಡಗೆ ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಶಿವರಾಜ ನಾಯ್ಕ, ಸಂಚಾಲಕ ಬಸವರಾಜ ನಾಯಕ, ಪ್ರ.ಕಾರ್ಯದರ್ಶಿ ನಿರುಪಾದಿ ಹಿರೇಮಠ, ಚಂದ್ರಕಾತ ಭೋವಿ ಇತರರಿದ್ದರು.
Published on

ಲಿಂಗಸುಗೂರು: ಮಿತಿ ಮೀರಿ ಡೊನೇಷನ್ ಪಡೆಯುವ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ಮಂಗಳವಾರ ಬಿಇಒ ಹುಂಬಣ್ಣ ರಾಠೋಡಗೆ ಮನವಿ ಸಲ್ಲಿಸಿದರು.

ಖಾಸಗಿ ಶಾಲೆಗಳಲ್ಲಿ ಮನಬಂದಂತೆ ಡೊನೇಷನ್ ಪಡೆಯಲಾಗುತ್ತಿದೆ. ಇಂಥದ್ದೇ ಬಟ್ಟೆ ಅಂಗಡಿಯಲ್ಲಿ ಸಮವಸ್ತ್ರ ಖರೀದಿಸುವಂತೆ ಪಾಲಕರಿಗೆ ಒತ್ತಡ ಹಾಕುತ್ತಾರೆ. ಇದು ಹೊರೆಯಾಗುತ್ತಿದೆ. ಹಲವು ಶಾಲೆಗಳಲ್ಲಿ ಪಠ್ಯಪುಸ್ತಕಗಳಿಗೆ ಶಿಕ್ಷಣ ಸಂಸ್ಥೆಗಳ ಲೋಗೋ ಹಾಕಿ ಮಾರಾಟ ಮಾಡಲಾಗುತ್ತಿದೆ.

ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಖಾಸಗಿ ಶಾಲೆಗಳು ವ್ಯಾಪಾರ ಕೇಂದ್ರಗಳನ್ನಾಗಿ ಮಾಡಿಕೊಂಡಿದ್ದು, ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸೇನೆ ತಾಲೂಕು ಅಧ್ಯಕ್ಷ ಶಿವರಾಜ ನಾಯ್ಕ, ಸಂಚಾಲಕ ಬಸವರಾಜ ನಾಯಕ, ಪ್ರಧಾನ ಕಾರ್ಯದರ್ಶಿ ನಿರುಪಾದಿ ಹಿರೇಮಠ, ಪ್ರಮುಖರಾದ ಚಂದ್ರಕಾತ ಭೋವಿ, ಮಹಾಂತಯ್ಯ ಸ್ವಾಮಿ, ಕಿರಣ ನಾಯಕ, ರಮೇಶ ಭೋವಿ, ಮಹೇಂದ್ರಕುಮಾರ, ಶಿವರಾಜ ಅಲಬನೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net