ಶಾಸಕ ಶ್ಯಾಮನೂರು ವಿರುದ್ಧ ಕ್ರಮಕೈಗೊಳ್ಳಿ

26-12-Shiva-2
ಹಡಪದ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಶಾಸಕ ಶಿವಶಂಕರಪ್ಪ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ರಾಯಚೂರಿನ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ವೇಣುಗೋಪಾಲಗೆ ಶಿವಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ಗದ್ದೆಪ್ಪ ಜಕ್ಕೇರಮಡು, ಪದಾಕಾರಿಗಳಾದ ನಾಗರಾಜ ಸರ್ಜಾಪುರ, ಧನಂಜಯ ಹಡಪದ, ಅಮರೇಶ ಕವಿತಾಳ, ಬಸವರಾಜ ಚಿಂಚರಕಿ, ಅಮರಪ್ಪ ಅಮೀನಗಡ, ಅಪ್ಪಣ್ಣ, ಬಸವರಾಜ ಹೀರಾ ಇದ್ದರು.
Published on

ರಾಯಚೂರು: ಹಡಪದ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಶಾಸಕ ಶ್ಯಾಮನೂರು ಶಿವಶಂಕರಪ್ಪ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿಕೊಂಡು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಶಿವಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ಒತ್ತಾಯಿಸಿದೆ.
ಸಂಘದ ನಿಯೋಗ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ವೇಣುಗೋಪಾಲಗೆ ಮಂಗಳವಾರ ಮನವಿ ಸಲ್ಲಿಸಿ, ಪತ್ರಿಕಾಗೋಷ್ಠಿಯಲ್ಲಿ ಹಜಾಮರು ವೀರಶೈವ ಲಿಂಗಾಯತ ಒಳ ಪಂಗಡದಲ್ಲಿದ್ದಾರೆ ಎಂದು ಹೇಳುವ ಮೂಲಕ ಹಡಪದ ಸಮಾಜಕ್ಕೆ ಅಪಮಾನ ಮಾಡಿದ್ದಾರೆ ಎಂದು ದೂರಿದರು.
ಶ್ಯಾಮನೂರು ಶಿವಶಂಕರಪ್ಪ ಹೇಳಿಕೆ ಕ್ಷೌರಿಕ ವೃತ್ತಿ ಬಾಂಧವರ ಆತ್ಮ ಗೌರವಕ್ಕೆ ಧಕ್ಕೆ ತಂದಿದ್ದು, ಕ್ಷೌರಿಕ ವೃತ್ತಿಗೆ ನಿಂದನೆ ಮಾಡುವಂತಹ ಪದ ಬಳಕೆ ಮಾಡಿದ್ದಾರೆ. ಹಜಾಮ ಎನ್ನುವ ವೃತ್ತಿ ನಿಂದನೆ ಸೂಚಕ ಪದವನ್ನು ಸರ್ಕಾರ ನಿಷೇಧ ಮಾಡಿ ಆದೇಶ ಹೊರಡಿಸಿದ್ದರೂ ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ಆ ಪದವನ್ನು ಬಳಕೆ ಮಾಡಿದ್ದಾರೆ.
ವೃತ್ತಿ ನಿಂದನೆ ಪದ ಬಳಕೆ ಮಾಡಿದ ವ್ಯಕ್ತಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎ್ಐಆರ್ ದಾಖಲು ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂಬುದನ್ನು ನೆಪವಾಗಿಟ್ಟುಕೊಂಡು ಅನೇಕರು ನಿಷೇತ ಪದವನ್ನು ಹಲವರು ಬಳಕೆ ಮಾಡುತ್ತಾ ಬರುತ್ತಿದ್ದಾರೆ.
ಕಾರಣ ನಿಷೇತ ಹಜಾಮ ಪದ ಬಳಕೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲು ಕಾನೂನಿನಲ್ಲಿ ಅವಕಾಶ ಕೊಡಬೇಕು. ಶ್ಯಾಮನೂರು ಶಿವಶಂಕರಪ್ಪರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಸಂಘದ ಜಿಲ್ಲಾಧ್ಯಕ್ಷ ಗದ್ದೆಪ್ಪ ಜಕ್ಕೇರಮಡು, ಪದಾಕಾರಿಗಳಾದ ನಾಗರಾಜ ಸರ್ಜಾಪುರ, ಧನಂಜಯ ಹಡಪದ, ಅಮರೇಶ ಕವಿತಾಳ, ಬಸವರಾಜ ಚಿಂಚರಕಿ, ಅಮರಪ್ಪ ಅಮೀನಗಡ, ಅಪ್ಪಣ್ಣ, ಬಸವರಾಜ ಹೀರಾ, ಗುಂಡಪ್ಪ ಕಟ್ಟಿಮನಿ, ಮಹಾದೇವ, ಪಂಪಾಪತಿ, ಪ್ರಭು, ಚಂದ್ರು, ಬಸವರಾಜ ನುಗಡೋಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net