

ಹುಬ್ಬಳ್ಳಿ: ಸರ್ಕಾರಿ ಶಾಲೆ ಕೆಡವಿ ಭೂ ಕಬಳಿಸುವ ಹುನ್ನಾರ ನಡೆಸಿದವರ ವಿರುದ್ಧ ಕ್ರಮ ಜರುಗಿಸಲು ಒತ್ತಾಯಿಸಿ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ನೇತೃತ್ವದಲ್ಲಿ ಬುಧವಾರ ಇಲ್ಲಿಯ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
138 ವರ್ಷಗಳ ಇತಿಹಾಸ ಹೊಂದಿರುವ ಹುಬ್ಬಳಿಯ ಗಿರಣಿಚಾಳದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗೋಡೆಯನ್ನು ದುಷ್ಕರ್ಮಿಗಳು ಕೆಡವಿದ್ದಾರೆ. ಈ ದುಷ್ಕತೃದಲ್ಲಿ ಭಾಗಿಯಾದವರ ತನಿಖೆ ನಡೆಸಿ ಕ್ರಮ ಜರುಗಿಸಬೇಕು. ಹೊಸದಾಗಿ ಶಾಲೆ ನಿರ್ಮಾಣ ಮಾಡಬೇಕು ಮತ್ತು ಗಿರಣಿಚಾಳ ಅಟ್ಟದ ಮೈದಾನ ಉಳಿಸಬೇಕೆಂದು ಒತ್ತಾಯಿಸಿ ಮನವಿಯನ್ನು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ರವಾನಿಸಲಾಯಿತು.
ಶೇಖರಯ್ಯ ಮಠಪತಿ, ಮಾರುತಿ ಹಾಲಹರವಿ, ಮಲ್ಲಿಕಾರ್ಜುನ ನಂದಿಹಾಳ, ಜಾಕೀರ್ ಕಲಾಲ್, ಜಾಫರ ಕುಮಟ, ವಿಜಯ ತಿಳಿಗಾಳ, ಬಸವರಾಜ ನಾಗಲಾಪುರ, ನವೀನ ಹಾಲಹರವಿ, ರವಿ ದೊಡ್ಮನಿ, ಶ್ರೀಕಾಂತ ಬಾರಕೇರ ಇತರರು ಇದ್ದರು.