ಕನ್ನೇರಿ ಶ್ರೀಗಳ ವಿರುದ್ಧ ಕ್ರಮಕೈಗೊಳ್ಳಿ

Manvi Kanneri sri
ಮಾನ್ವಿಯಲ್ಲಿ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹೀದ್‌ಗೆ ಬಸವ ಕೇಂದ್ರ ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಘಟಕದಿಂದ ಮನವಿ ಸಲ್ಲಿಸಲಾಯಿತು. ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ರುದ್ರಪ್ಪ ಪಗಡದಿನ್ನಿ, ಬಸವಕೇಂದ್ರದ ಗೌರವಾಧ್ಯಕ್ಷ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು, ದೇವೇಂದ್ರ ದುರ್ಗದ್, ಶಂಭನಗೌಡ ಇತರರಿದ್ದರು.
Published on

ಮಾನ್ವಿ: ಲಿಂಗಾಯತ ಮಠಾಧೀಶರ ಕುರಿತು ಕನ್ನೇರಿಯ ಅದೃಶ್ಯ ಕಾಡ ಸಿದ್ಧೇಶ್ವರ ಶ್ರೀಗಳ ಅವಹೇಳನಕಾರಿ ಹೇಳಿಕೆ ಖಂಡಿಸಿ ಬಸವ ಕೇಂದ್ರ ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಘಟಕದಿಂದ ಗುರುವಾರ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹೀದ್‌ಗೆ ಮನವಿ ಸಲ್ಲಿಸಲಾಯಿತು.

ರಾಜ್ಯ ಸರ್ಕಾರ ‘ಬಸವಣ್ಣ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿದ್ದರಿಂದ ಲಿಂಗಾಯತ ಮಠಾಧೀಶರ ಒಕ್ಕೂಟದಿಂದ ಸೆ.1 ರಿಂದ 30 ರವರೆಗೆ ಬಸವ ಸಂಸ್ಕೃತಿ ಅಭಿಯಾನ ಆಯೋಜಿಸಲಾಗಿತ್ತು. ಅ.5 ರಂದು ಬೆಂಗಳೂರಿನಲ್ಲಿ ಸಮಾರೋಪಗೊಂಡಿತು.

ಈ ಕಾರ್ಯಕ್ರಮ ಕುರಿತು ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಜಿಲ್ಲೆಯ ಅದೃಶ್ಯ ಕಾಡಸಿದ್ಧ್ದೇಶ್ವರ ಸ್ವಾಮೀಜಿ ಅ.9 ರಂದು ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಬೀಳೂರು ಗ್ರಾಮದಲ್ಲಿ ಲಿಂಗಾಯತ ಮಠಾಧೀಶರನ್ನು ಅವಾಚ್ಯ ಪದಗಳಿಂದ ನಿಂದಿಸಿ, ಅಸಂವಿಧಾನಿಕವಾಗಿ ಮಾತನಾಡಿದ್ದಾರೆ. ಇದು ಲಿಂಗಾಯತ ಧರ್ಮದ ಗುರು ವರ್ಗ ಮತ್ತು ಬಸವ ಭಕ್ತರ ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ. ಇಂತಹ ಹೇಳಿಕೆ ನೀಡಿರುವ ಕನ್ನೇರಿ ಶ್ರೀಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ರುದ್ರಪ್ಪ ಪಗಡದಿನ್ನಿ, ಬಸವಕೇಂದ್ರ ಗೌರವಾಧ್ಯಕ್ಷ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು, ಹರವಿ ನಾಗನಗೌಡ ಹರವಿ, ಮಲ್ಲಿಕಾರ್ಜುನ ಗುಡಿ, ಮಹಾಸಭಾ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನಗೌಡ ಚಿಮ್ಲಾಪುರ, ಬಸವಕೇಂದ್ರದ ತಾಲೂಕು ಅಧ್ಯಕ್ಷ ರಂಗಪ್ಪ ಜಿ.ಎಂ., ಪದಾಧಿಕಾರಿಗಳಾದ ಶೇಖರಪ್ಪ ಪಾಟೀಲ್ ವಕೀಲ, ದೊಡ್ಡ ಬಸನಗೌಡ ಚಿಮ್ಲಾಪುರ, ದೇವೇಂದ್ರ ದುರ್ಗದ್, ಶಂಬನಗೌಡ, ಅಮರೇಶ ಗವಿಗಟ್ಟು, ಉದಯಕುಮಾರ, ಸಂತೋಷಕುಮಾರ, ಮಹಾಂತೇಶ ಗವಿಗಟ್ಟು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net