ಜೆಸ್ಕಾಂ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳಿ

24-05-Shiva-2
ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸದೆ ನಿರ್ಲಕ್ಷ ತೋರಿರುವ ಜೆಸ್ಕಾಂ ಅಧಿಕಾರಿ ಬನ್ನಪ್ಪ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ರಾಯಚೂರಿನ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಜಿಲ್ಲಾ ಉಪ್ಪಾರ ಸಮಾಜ ಸೇವಾ ಸಂಘದಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಪಾಗುಂಟಪ್ಪ ಮಿರ್ಜಾಪುರ, ಗೌರವಾಧ್ಯಕ್ಷ ದೇವೇಂದ್ರಪ್ಪ ಉಪ್ಪಾರ, ಪದಾಕಾರಿಗಳಾದ ಎ.ಚಂದ್ರಶೇಖರ, ಸುರೇಖಾ, ಬಿ.ಎಸ್.ಮಾಲತಿ, ಶ್ರೀನಿವಾಸಲು, ಈರಣ್ಣ, ಗೋಪಾಲ, ಪಾಗುಂಟಪ್ಪ, ಸಂತೋಷ ಸಾಗರ್ ಇದ್ದರು.
Published on

ರಾಯಚೂರು: ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸದೆ ನಿರ್ಲಕ್ಷ ವಹಿಸಿದ ಹಟ್ಟಿ ಪಟ್ಟಣದ ಜೆಸ್ಕಾಂ ಅಧಿಕಾರಿ ಬನ್ನಪ್ಪ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಲ್ಲಾ ಉಪ್ಪಾರ ಸಮಾಜ ಸೇವಾ ಸಂಘ ಆಗ್ರಹಿಸಿದೆ.
ಸಂಘದ ನಿಯೋಗ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಶುಕ್ರವಾರ ಮನವಿ ಸಲ್ಲಿಸಿ, ಸರ್ಕಾರದ ಆದೇಶದಂತೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಭಗೀರಥ ಮಹರ್ಷಿ ಜಯಂತಿ ಆಚರಿಸುವಂತೆ ಆದೇಶವಿದ್ದರೂ ಬನ್ನಪ್ಪ ಉಲ್ಲಂಸಿದ್ದಾರೆ ಎಂದು ದೂರಿದರು.
ರಾಜ್ಯದ ಎಲ್ಲ ಕಚೇರಿಗಳಲ್ಲಿ ಭಗೀರಥ ಜಯಂತಿ ಆಚರಿಸಲಾಗಿದ್ದು, ಆಯಾ ಕಚೇರಿ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಬನ್ನಪ್ಪ ಜಯಂತಿಯಲ್ಲಿ ಭಾಗವಹಿಸದೆ ನಿರ್ಲಕ್ಷ ತೋರಿದ್ದಾರೆ. ಕಾರಣ ಬನ್ನಪ್ಪ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಸಂಘದ ಅಧ್ಯಕ್ಷ ಪಾಗುಂಟಪ್ಪ ಮಿರ್ಜಾಪುರ, ಗೌರವಾಧ್ಯಕ್ಷ ದೇವೇಂದ್ರಪ್ಪ ಉಪ್ಪಾರ, ಪದಾಕಾರಿಗಳಾದ ಎ.ಚಂದ್ರಶೇಖರ, ಸುರೇಖಾ, ಬಿ.ಎಸ್.ಮಾಲತಿ, ಶ್ರೀನಿವಾಸಲು, ಈರಣ್ಣ, ಗೋಪಾಲ, ಪಾಗುಂಟಪ್ಪ, ಸಂತೋಷ ಸಾಗರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net