ಅಕ್ರಮ ಮರಳುಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಿ

Take action against illegal sand mining
ಘಟಪ್ರಭಾ ನದಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಂಗಳವಾರ ರೈತ ಸಂಘದಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮಹದೇವ ಸನಮುರಿಗೆ ಮನವಿ ಸಲ್ಲಿಸಲಾಯಿತು. ಬಸವಂತ ಕಾಮಬಳೆ, ಸುರೇಶ ಚಿಂಚಲಿ,ಮಹೇಶಗೌಡ ಪಾಟೀಲ್ ಮತ್ತಿತರರಿದ್ದರು.
Published on

ಮುಧೋಳ: ಘಟಪ್ರಭಾ ನದಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಂಗಳವಾರ ರೈತ ಸಂಘದಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮಹದೇವ ಸನಮುರಿಗೆ ಮನವಿ ಸಲ್ಲಿಸಲಾಯಿತು.

ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತ ಕಾಂಬಳೆ ಮಾತನಾಡಿ, ಒಂದು ತಿಂಗಳಲ್ಲಿ ನದಿಯ ಸಂಪೂರ್ಣ ಮರಳು ಬರಿದಾಗುವ ಸಾಧ್ಯತೆ ಇದ್ದೂ, ಇದರಿಂದ ನದಿಯ ಆರೋಗ್ಯ ಹದಗೆಡುವುದರ ಜತೆಗೆ ಜಲಚರಗಳಿಗೆ ಅಪಾಯ ಎದುರಾಗಲಿದೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಶೀಘ್ರದಲ್ಲೇ ಘಟಪ್ರಭಾ ನದಿ ಇತಿಹಾಸದ ಪುಟ ಸೇರುತ್ತದೆ. ಆದ್ದರಿಂದ ಸಮಸ್ಯೆ ನಿರ್ಲಕ್ಷಿಸದೆ ನದಿ ಉಳಿಸುವ ಕಾರ್ಯವಾಗಬೇಕು ಎಂದರು.

ರೈತ ಸಂಘದ ಪ್ರಮುಖರಾದ ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತ ಕಾಂಬಳೆ, ಮಹೇಶಗೌಡ ಪಾಟೀಲ, ಸುರೇಶ್ ಚಿಂಚಲಿ, ಸುಭಾಷ ಶಿರಭೂರ, ಹನುಮಂತ ನಬಾಬ, ನ್ಯಾಯವಾದಿ ಲಕ್ಕಪ್ಪ ಸುನಗದ, ಯಲಪ್ಪ ಹೆಗಡೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net