

ಶಿಗ್ಗಾಂವಿ: ತಾಲೂಕಿನ ಶಿಶುವಿನಹಾಳ ಗ್ರಾಮ ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷರಾಗಿ ಟಾಕಪ್ಪ ಬಸವಣ್ಣೆಪ್ಪ ಕಟ್ಟಾಣಿ ಹಾಗೂ ಉಪಾಧ್ಯಕ್ಷೆಯಾಗಿ ಗಂಗವ್ವ ಬಸಪ್ಪ ಹಂಚಿನಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶಿಶುವಿನಹಾಳ ಗ್ರಾಪಂ 8 ಸದಸ್ಯರ ಬಲ ಹೊಂದಿದ್ದು, ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ‘ಅ’ ವರ್ಗ ಮಹಿಳೆ ಮೀಸಲಾಗಿತ್ತು. ಶುಕ್ರವಾರ ನಡೆದ ಸಭೆಯಲ್ಲಿ ಇಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ಅಧಿಕಾರಿ ಬಸವರಾಜ ಬಿಡಿ ಇವರಿಬ್ಬರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಘೊಷಣೆ ಮಾಡಿದರು.
ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಸದಸ್ಯರಾದ ಚೆನ್ನಬಸಪ್ಪ ಬೆಟದೂರ, ನಿಂಗಪ್ಪ ಬೆಂತೂರ, ನಿಂಗಯ್ಯ ಪೂಜಾರ, ಶಾಂತವ್ವ ತಿಪ್ಪನಗೌಡ್ರ, ಗಂಗವ್ವ ಮಾದರ, ಸುಧಾ ವಾಲ್ಮೀಕಿ, ಪಿಡಿಒ ಮಂಜುನಾಥ ತಳವಾರ, ರವಿ ರಾಮಪ್ಪ ದೊಡ್ಡಮನಿ, ಶಿವಯ್ಯ ಶೇಕರಯ್ಯ ಹಿರೇಮಠ, ಇತರರಿದ್ದರು.