ಟೈಲರ್   ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆ

RemasterDirector_1a5c03258
RemasterDirector_1a5c03258
Published on

 ಪಿರಿಯಾಪಟ್ಟಣ : ಸರ್ಕಾರದ ಸವಲತ್ತು ಪಡೆಯುವಲ್ಲಿ ಟೈಲರ್‌ಗಳು ಮುಂದಾಗಬೇಕು ಎಂದು ಟೈಲರ್ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಪುಟ್ಟಸ್ವಾಮಿಗೌಡ ಸಲಹೆ ನೀಡಿದರು. ಪಟ್ಟಣದ ಖಾಸಗಿ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ಟೈಲರ್‌ಗಳ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟಿಸಿ ಮಾತನಾಡಿದರು.

1985ರಲ್ಲಿ ಪ್ರಾರಂಭಗೊಂಡಿರುವ ರಾಜ್ಯ ಟೈಲರ್ ಸಂಘ ಈರೆಗೆ ಹಲವು ಸವಾಲುಗಳನ್ನು ದಾಟಿ ಬಂದಿದೆ. ರಾಜ್ಯದಲ್ಲಿ ಟೈಲರ್ ವೃತ್ತಿಪರರು ಸಂಘಟಿತರಾಗಬೇಕು ಎನ್ನುವ ಉದ್ದೇಶದಿಂದ ಸಂಘವನ್ನು ಮುನ್ನಡೆಸಲಾಗುತ್ತಿದೆ ಎಂದರು. ಕ್ಷೇಮಾಭಿವೃದ್ಧಿ ಸಂಘ ಕೇವಲ ಪಟ್ಟಣಕ್ಕೆ ಮಾತ್ರ ಸೀಮಿತವಾಗದೆ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸುವ ಮೂಲಕ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಇದಕ್ಕೆ ಒಗ್ಗಟ್ಟು, ಸಹಕಾರ ಹಾಗೂ ಶಕ್ತಿ ತುಂಬುವ ಕೆಲಸ ಸದಸ್ಯರಿಂದ ಆಗಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net