ಟೈಲರ್ ಕಲ್ಯಾಣ ಮಂಡಳಿ ರಚನೆಗೆ ಹೂವಿನಹಡಗಲಿಯಲ್ಲಿ ಫೆಡರೇಷನ್‌ನಿಂದ ಪ್ರತಿಭಟನೆ

091120 Hadagali Tailar Federation Protest
ಹೂವಿನಹಡಗಲಿಯ ಶಾಸ್ತ್ರೀ ವೃತ್ತದಲ್ಲಿ ಟೈಲರ್, ಟೈಲರ್ ಸಹಾಯಕರ ಫೆಡರೇಷನ್‌ನಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
Published on

ಹೂವಿನಹಡಗಲಿ: ಟೈಲರ್ ಕಲ್ಯಾಣ ಮಂಡಳಿ ರಚನೆಗೆ ಆಗ್ರಹಿಸಿ ಟೈಲರ್, ಟೈಲರ್ ಸಹಾಯಕರ ಫೆಡರೇಷನ್‌ನಿಂದ ಪಟ್ಟಣದ ಶಾಸ್ತ್ರೀ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಎಐಟಿಯುಸಿ ಮುಖಂಡ ಶಾಂತರಾಜ ಜೈನ್ ಮಾತನಾಡಿ, ಟೈಲರ್ ವೃತ್ತಿ ಮಾಡುವವರು ಅಸಂಘಟಿತರಾಗಿದ್ದು, ಸರ್ಕಾರದ ಯಾವುದೇ ಸೌಲಭ್ಯ ಸಿಗದೆ ಜೀವನ ದುಸ್ತರವಾಗಿದೆ. ಕೂಡಲೇ ಸರ್ಕಾರ ಕಟ್ಟಡ ಕಾರ್ಮಿಕರ ಮಂಡಳಿ ಮಾದರಿಯಲ್ಲಿ ಟೈಲರ್ ಕಲ್ಯಾಣ ಮಂಡಳಿ ರಚಿಸಿ ಟೈಲರ್‌ಗಳಿಗೆ ಸರ್ಕಾರದ ಸೌಲಭ್ಯ ಕಲ್ಪಿಸಬೇಕು. ಮಹಿಳೆಯರು ಹೆಚ್ಚಾಗಿ ಟೈಲರ್ ಕೆಲಸ ಮಾಡುತ್ತಿರುವುದರಿಂದ ಅಗತ್ಯ ಸೌಲಭ್ಯ ಸಿಗುವಂತಾಗಬೇಕು. ಕೂಡಲೇ ಕ್ರಮಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಎಐಟಿಯುಸಿ ತಾಲೂಕು ಸಂಚಾಲಕ ಸುರೇಶ ಹಲಗಿ, ಕೆಎಸ್‌ಟಿಎ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷ ಕಾಸೀಂಸಾಬ್, ಪ್ರಮುಖರಾದ ಬಸವರಾಜ್, ಎಂ.ದಯಾನಂದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net