ಟೈಲರ್ ವೃತ್ತಿಬಾಂಧವರು ಒಗ್ಗಟ್ಟು ಪ್ರದರ್ಶಿಸಿ

21 ckm 2
ಚಿಕ್ಕಮಗಳೂರಿನ ಡಿಎಸ್‌ಎಂಎಸ್ ಆವರಣದಲ್ಲಿ ಟೈಲರ್ ಸಹಕಾರ ಸಂಘದ ೨೦೨೩-೨೪ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉz್ದೆÃಶಿಸಿ ಟೈಲರ್ ಸಹಕಾರ ಸಂಘದ ಅಧ್ಯಕ್ಷ ಎಸ್.ಪಿ.ಅಶೋಕ್ ಮಾತನಾಡಿದರು. ಜೈನಾಬಿ ಸಿಖಂದರ್, ಎಚ್.ಆರ್.ರಾಜು, ಸಿ.ಯುವರಾಜ್, ವಜೀರ್ ಅಹ್ಮದ್, ಬಿ.ಸಿ.ಶೋಭಾ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಟೈಲರ್ ವೃತ್ತಿಬಾಂಧವರಿಗೆ ಸಹಕಾರ ಸಂಘದಿAದ ಸುಮಾರು ೧೧ ಲಕ್ಷ ರೂ.ಗಳ ಸಾಲಸೌಲಭ್ಯ ಒದಗಿಸಿ ಕುಟುಂಬವನ್ನು ಆರ್ಥಿಕವಾಗಿ ಸದೃಢಗೊಳಿಸಲು ಮುಂದಾಗಲಾಗಿದೆ ಎಂದು ಟೈಲರ್ ಸಹಕಾರ ಸಂಘದ ಅಧ್ಯಕ್ಷ ಎಸ್.ಪಿ.ಅಶೋಕ್ ತಿಳಿಸಿದರು.

ನಗರದ ಡಿಎಸ್‌ಎಂಎಸ್ ಆವರಣದಲ್ಲಿ ಟೈಲರ್ ಸಹಕಾರ ಸಂಘದ ೨೦೨೩-೨೪ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಸಂಘವು ಪ್ರಾರಂಭಗೊAಡು ಮೂರು ವರ್ಷ ಕಳೆದಿದ್ದು, ೨೭೦ ಸದಸ್ಯರ ಸಂಖ್ಯಾ ಬಲವಿದೆ. ಸಹಕಾರ ಸಂಘದಲ್ಲಿ ೨.೭೦ ಲಕ್ಷ ರೂ. ಠೇವಣಿ ಇರಿಸಲಾಗಿದೆ. ಜೊತೆಗೆ ಡಿಸಿಸಿ ಬ್ಯಾಂಕ್‌ನ ಎಸ್‌ಬಿ ಖಾತೆಯಲ್ಲಿ ೬ ಲಕ್ಷ ರೂ. ಇರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸದಸ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಘದ ೩೩ ಕುಟುಂಬದ ೧೧೫ ಮಂದಿಗೆ ಯಶಸ್ವಿನಿ ಕಾರ್ಡ್ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಮುಂಬರುವ ದಿನಗಳಲ್ಲಿ ಸರ್ಕಾರದಿಂದ ಶಾಲಾ ಸಮವಸ್ತç ತಯಾರಿಸುವ ನಿಟ್ಟಿನಲ್ಲಿ ನೇರವಾಗಿ ಗುತ್ತಿಗೆ ಪಡೆಯುವ ಆಲೋಚನೆಯಿದೆ ಎಂದು ತಿಳಿಸಿದರು.
ಅಸಂಘಟಿತ ಕಾರ್ಮಿಕರಾಗಿ ದುಡಿಯುತ್ತಿರುವ ಟೈಲರ್ ವೃತ್ತಿಬಾಂಧವರು ಅನೇಕ ಸವಲತ್ತಿನಿಂದ ವಂಚಿತರಾಗಿದ್ದಾರೆ. ಸರ್ಕಾರದ ಸವಲತ್ತುಗಳು ಪಡೆದುಕೊಳ್ಳಲು ಟೈರ‍್ಸ್ ಕಾರ್ಮಿಕರು ಸಂಘಟನೆ ಜೊತೆಗೂಡಿದರೆ ಮಾತ್ರ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಹೇಳಿದರು.
ಉಪಾಧ್ಯಕ್ಷೆ ಜೈನಾಬಿ ಸಿಖಂದರ್ ಮಾತನಾಡಿ, ಟೈಲರ್ ಕಾರ್ಮಿಕರಿಗೆ ಸಹಕಾರ ಸಂಘದಿAದ ಬಹಳಷ್ಟು ಉಪಯೋಗವಾಗುತ್ತಿದೆ. ತುರ್ತು ಸಂದರ್ಭದಲ್ಲಿ ಸಾಲಸೌಲಭ್ಯ ಒದಗಿಸಲಾಗುತ್ತಿದೆ. ಸಾಲ ಪಡೆದಂಥ ಸದಸ್ಯರುಗಳು ನಿಗಧಿತ ಸಮಯಕ್ಕೆ ಮರುಪಾವತಿಸಿದರೆ ಇತರೆ ಸದಸ್ಯರಿಗೆ ಸಾಲದ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಎಚ್.ಆರ್.ರಾಜು, ಸಿ.ಯುವರಾಜ್, ವಜೀರ್ ಅಹ್ಮದ್, ಬಿ.ಸಿ.ಶೋಭಾ, ಲಕ್ಷ್ಮೀಕಾಂತ್, ಸತೀಶ್, ಪಾಂಡುಕುಮಾರ್, ಮಂಜುನಾಥ್, ಕಾರ್ಯದರ್ಶಿ ಸಿ.ಎನ್.ಜಾನಕಿ, ಪಿಗ್ನಿ ಸಂಗ್ರಹಕ ಸಿ.ಎಸ್.ರುದ್ರೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net