ಸ್ವಾವಲಂಬನೆಗೆ ಟೈಲರಿಂಗ್ ತರಬೇತಿ ಪೂರಕ

IMG-20240312-WA0213
Published on

ಆಲೂರು : ಮಹಿಳೆಯರು ಸ್ವಾವಲಂಬನೆಯ ಬದುಕು ರೂಪಿಸಿಕೊಳ್ಳಲು ಕಸೂತಿ, ಹೊಲಿಗೆ ಮುಂತಾದ ಕೌಶಲದ ತರಬೇತಿ ಪಡೆಯಬೇಕು ಎಂದು ಶಾಸಕ ಸಿಮೆಂಟ್ ಮಂಜುನಾಥ್ ಹೇಳಿದರು. ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಡಿ. ದೇವರಾಜ ಅರಸು ನಿಗಮದ ವತಿಯಿಂದ ಹೊಲಿಗೆ ತರಬೇತಿಯನ್ನು ಪಡೆದಿರುವ 36 ಮಹಿಳೆಯರಿಗೆ ಬುಧವಾರ ಹೊಲಿಗೆ ಯಂತ್ರವನ್ನು ವಿತರಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಜನಪರ ಕಾರ್ಯಕ್ರಮಗಳು ಕಟ್ಟ ಕಡೆಯ ವ್ಯಕ್ತಿಗೂ ತಲುಪುಬೇಕು ಎಂಬುದು ನಮ್ಮದು. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರ ತತ್ವ, ಆದರ್ಶಗಳನ್ನು ಅನುಸರಿಸಿ ಅವರ ಉದ್ದೇಶವನ್ನು ಕ್ಷೇತ್ರದ ಪ್ರತಿಯೊಬ್ಬರಿಗೂ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವೆ ಎಂದು ಹೇಳಿದರು. ಮೋದಿ ಸರ್ಕಾರ ಮಹಿಳೆಯರಿಗೆ ಶೇ. 33ರಷ್ಟು ರಾಜಕೀಯ ಮೀಸಲಾತಿಯನ್ನು ನೀಡುವುದರೊಂದಿಗೆ ಉಚಿತ ಅಡುಗೆ ಅನಿಲ (ಉಜ್ವಲ ಯೋಜನೆ) ಮುಂತಾದ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದೆ. ಸ್ತ್ರೀಯರ ಅಭ್ಯುದಯಕ್ಕೆ ಇವೆಲ್ಲವೂ ಪೂರಕವಾಗಿವೆ ಎಂಬುದನ್ನು ಯಾರೂ ಮರೆಯಬಾರದು ಎಂದರು.
ತಾಲೂಕು ಪಂಚಾಯತಿ ಇಒ ಗಿರೀಶ್, ಬಿಸಿಎಂ ಇಲಾಖೆ ಸಹಾಯಕ ನಿರ್ದೇಶಕ ನಾಗೇಂದ್ರ, ಬಿಜೆಪಿ ಮುಖಂಡರಾದ ಲೋಕೇಶ, ಅಜಿತ್, ಹನುಮಂತೇಗೌಡ, ನಟರಾಜ್, ಜೆಸಿಬಿ ರವಿ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net