ಮಳೆ ಹಾನಿ ಪ್ರದೇಶಗಳಿಗೆ ತಹಸೀಲ್ದಾರ್ ಭೇಟಿ

MUL
Published on

ಮುಳಗುಂದ: ನಿರಂತರ ಮಳೆಯಿಂದ ಹಾನಿಗೊಳಗಾದ ಹೊಲಗಳಿಗೆ ಬುಧವಾರ ಗದಗ ತಹಸೀಲ್ದಾರ್ ಶಿವಮೂರ್ತಿ ಕುಲಕರ್ಣಿ, ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಮಲ್ಲಯ್ಯ ಕೊರವನವರ ಭೇಟಿ ನೀಡಿದರು. ಅತಿವೃಷ್ಟಿಯಿಂದ ಹಾನಿಗೊಳಗಾದ ಹೆಸರು, ಶೇಂಗಾ, ಗೋವಿನಜೋಳವನ್ನು ವೀಕ್ಷಣೆ ಮಾಡಿದರು. ಆ.1ರಿಂದ ಶೇ.200ರಷ್ಟು ಮಳೆ ಹೆಚ್ಚಾಗಿದೆ. ಹೆಸರು ಬೆಳೆ ಸಂಪೂರ್ಣ ನಾಶವಾಗಿದೆ. ಬೆಳೆ ಹಾನಿಯಾದ ಬಗ್ಗೆ ಪ್ರಾಥಮಿಕ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು ಎಂದು ತಹಸೀಲ್ದಾರ್ ಶಿವಮೂರ್ತಿ ಕುಲಕರ್ಣಿ ತಿಳಿಸಿದರು. ಪಟ್ಟಣ ಪಂಚಾಯ್ತಿ ಸದಸ್ಯ ಮಹಾದೇವಪ್ಪ ಗಡಾದ, ಕಂದಾಯ ನಿರೀಕ್ಷಕ ಎನ್.ಐ. ಹಡಗಲಿಮಠ, ಇಂಗಳಹಳ್ಳಿ, ರೈತರಾದ ದೇವಪ್ಪ ಅಣ್ಣಿಗೇರಿ, ದೇವರಾಜ ಸಂಗನಪೇಟಿ. ಮಹಾಂತೇಶ ಗುಂಜಳ, ಕಿರಣ ಕುಲಕರ್ಣಿ, ಹಾಲಪ್ಪ ಯಲವಿಗಿ, ಮಹಾಂತೇಶ ವೆಂಕಟಾಪುರ, ಮಂಜುನಾಥ ಕಬಾಡಿ, ಮುತ್ತಪ್ಪ ಸುಂಕದ, ಪರಪ್ಪ, ಲದ್ದಿ, ಗಂಗಾಧರ ಹೊರಪೇಟಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net