ಗುಡ್ಡ ಕುಸಿತ ಸ್ಥಳಕ್ಕೆ ತಹಸೀಲ್ದಾರ್ ಭೇಟಿ

byn
Published on

ಬೈಂದೂರು: ಪಡುವರಿ ಗ್ರಾಮದ ದೊಂಬೆ ಪುಂಡನಮನೆ ತ್ರಿಶೂಲ ಜಟ್ಟಿಗೇಶ್ವರ ದೇವಸ್ಥಾನದ ಬಳಿ ಗುಡ್ಡ ಕುಸಿದ ಸ್ಥಳಕ್ಕೆ ಶುಕ್ರವಾರ ಬೈಂದೂರು ತಹಸೀಲ್ದಾರ್ ಭೀಮಸೇನ ಕುಲಕರ್ಣಿ ಹಾಗೂ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗುಡ್ಡ ಕುಸಿದಿರುವ ಬಗ್ಗೆ ಶುಕ್ರವಾರ ವಿಜಯವಾಣಿ ಬೆಳಕು ಚೆಲ್ಲಿತ್ತು. ವರದಿಗೆ ಸ್ಪಂದಿಸಿದ ಅಧಿಕಾರಿಗಳು ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವ ಜೂತೆಗೆ ರಸ್ತೆಗೆ ಬಾಗಿಕೊಂಡ ಮರಗಳನ್ನು ಕಡಿದು, ಸಂಚಾರದ ಸುರಕ್ಷತೆಗಾಗಿ ಗುಡ್ಡದ ಕುಸಿದ ಭಾಗದಲ್ಲಿ ಬ್ಯಾರಿಕೇಡ್ ಹಾಗೂ ಸೂಚನಾಫಲಕ ಅಳವಡಿಸಲಾಗಿದೆ.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಜಯ್ ಭಂಡಾರ್ಕರ್, ಬೈಂದೂರು ವಲಯ ಅರಣ್ಯಾಾಧಿಕಾರಿ ಸಂದೇಶ ಕುವಾರ್, ಬೈಂದೂರು ಮೆಸ್ಕಾಂ ಇಲಾಖೆ ಉಪವಿಭಾಗಾಧಿಕಾರಿ ಹರೀಶ್, ಕರಾವಳಿ ಕಾವಲು ಪಡೆ ಪಿಎಸ್‌ಐ ಸುಬ್ರಹ್ಮಣ್ಯ, ಉಪವಲಯ ಅರಣ್ಯಾಧಿಕಾರಿ ಹರ್ಷ ವಿ., ಗ್ರಾ.ಪಂ. ವಾಜಿ ಸದಸ್ಯ ಸಂಜೀವ ಮೊಗವೀರ, ಅರಣ್ಯ ವೀಕ್ಷಕ ಶಂಕರ, ಅರಣ್ಯ ಇಲಾಖೆ, ಪಟ್ಟಣ ಪಂಚಾಯಿತಿ, ಕರಾವಳಿ ಕಾವಲು ಪಡೆ ಹಾಗೂ ಮೆಸ್ಕಾಂ ಇಲಾಖೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net