

ಕಲಕೇರಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಡಿ. ಜಿ. ಸಾಗರ ಬಣ) ಸದಸ್ಯರು ಗ್ರಾಮದಲ್ಲಿ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ ಗುರುವಾರ ನಾಲ್ಕನೇ ದಿನ ಪೂರೈಸಿತು.
ಧರಣಿ ಸ್ಥಳಕ್ಕೆ ಗುರುವಾರ ತಾಳಿಕೋಟೆ ತಹಸೀಲ್ದಾರ್ ವಿನಯಾ ಹೂಗಾರ ಭೇಟಿ ನೀಡಿ ಧರಣಿ ನಿರತರ ಸಮಸ್ಯೆ ಆಲಿಸಿ ಮನವಿಯನ್ನು ಸ್ವೀಕರಿಸಿದರು.
ಪ್ರತಿಭಟನಾಕಾರರು ಮಾತನಾಡಿ, ವಿವಿಧ ಇಲಾಖೆಗಳ ಅಡಿಯಲ್ಲಿ ಬರುವ ನಮ್ಮ ಭಾಗದ ಬೇಡಿಕೆಗಳು ಈಡೇರುವವರೆಗೂ ಧರಣಿ ಸತ್ಯಾಗ್ರಹ ಕೈಬಿಡುವುದಿಲ್ಲ ಎಂದು ಎಚ್ಚರಿಸಿದರು.
ಕಲಕೇರಿ ಪಿಎಸ್‌ಐ ಸುರೇಶ ಮಂಟೂರ, ರಣಧೀರ ಪಡೆಯ ಉತ್ತರ ಕರ್ನಾಟಕ ಅಧ್ಯಕ್ಷ ಸಂತೋಷ ಮಣಿಗೇರಿ, ಡಿಎಸ್‌ಎ್ ಜಿಲ್ಲಾ ಸಂಚಾಲಕ ವೈ.ಸಿ. ಮಯೂರ, ಡಿಎಸ್‌ಎಸ್ ಕಲಕೇರಿ, ವಲಯ ಸಂಚಾಲಕ ಸೋಮಶೇಖರ ಬಡಿಗೇರ, ಡಿಎಸ್‌ಎಸ್ ತಾಲೂಕು ಮುಖಂಡರಾದ ಯಮನೂರಿ ಸಿಂದಗಿರಿ, ಗ್ರಾಮಶಾಖೆಯ ಸಂಚಾಲಕ ಬಸವರಾಜ ಗುಡಸಲಮನಿ, ಸಹಸಂಚಾಲಕ ಆನಂದ ಹೊಸಮನಿ ಇತರರಿದ್ದರು.