ಪುತ್ತೂರು: ಲೋಕಾಯುಕ್ತದಲ್ಲಿ ಲಂಚ ಸ್ವೀಕಾರದ ಬಗ್ಗೆ ತಹಸೀಲ್ದಾರ್ ಮೇಲೆ ಪ್ರಕರಣ ದಾಖಲಾಗಿದ ಹಿನ್ನೆಲೆಯಲ್ಲಿ ನಾಪತ್ತೆಯಾದ ಸ್ಥಾನಕ್ಕೆ ಗ್ರೇಡ್ ೨ ತಹಸೀಲ್ದಾರ್ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಭೂಸುಧಾರಣಾ ಶಾಖೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬೀಳುತ್ತಿದ್ದಂತೆ ನಾಪತ್ತೆಯಾದ ತಹಸಿಲ್ದಾರ್ ಎಸ್.ಬಿ.ಕೂಡಲಗಿ ಬಾರದೆ ಕಚೇರಿಯಲ್ಲಿ ಜನರ ಕೆಲಸಗಳು ನಡೆಯುತ್ತಿಲ್ಲ ಎಂಬ ವಿಜಯವಾಣಿ ವರದಿಯಿಂದ ಎಚ್ಚೆತ್ತುಕೊಂಡ ಕಂದಾಯ ಇಲಾಖೆ ಪುತ್ತೂರು ಸಹಾಯಕ ಆಯುಕ್ತ ಕಚೇರಿ ವ್ಯವಸ್ಥಾಪಕರಾಗಿದ್ದ ನಾಗರಾಜ್ ಅವರಿಗೆ ಪ್ರಭಾರ ತಹಸೀಲ್ದಾರ್ ಆಗಿ ನಿಯೋಜಿಸಲಾಗಿದೆ.
ಸೆ.೧೦ರಂದು ಪ್ರಭಾರ ತಹಸೀಲ್ದಾರ್ ಆಗಿ ನಾಗರಾಜ್ ಅವರನ್ನು ನಿಯೋಜಿಸಿದ್ದು, ಕಡತಗಳ ವಿಲೇವಾರಿ ನಡೆಸುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಜಿಲ್ಲಾಡಳಿತದಿಂದಲೂ ಇದಕ್ಕೆ ಅಗತ್ಯ ಸೂಚನೆಯನ್ನು ತಾಲೂಕು ಕಚೇರಿಗೆ ನೀಡಿದ್ದಾರೆನ್ನಲಾಗಿದೆ. ಜೂನ್ ೧ರಿಂದ ಜು.೧೬ರವರೆಗೆ ಪ್ರಭಾರ ತಹಸೀಲ್ದಾರ್ ಆಗಿದ್ದ ಸಮಯದಲ್ಲೂ ಯಾವುದೇ ಕಡತ ವಿಲೇವಾರಿಗೆ ಮುಂದಾಗದೆ ಜನರು ನಿತ್ಯ ಕಚೇರಿ ಅಲೆದಾಡುತ್ತಿದ್ದರು.