ಜಮೀನಿನಲ್ಲಿ ರೇಷ್ಮೆ ಮನೆ ಮುಂದೆ ಕಟ್ಟಿದ್ದ 2 ಟಗರು ಕಳ್ಳತನ

maxresdefault
Published on

ಬ್ಯಾಡಗಿ: ರೇಷ್ಮೆ ಸಾಕಾಣಿಕೆ ಮನೆ ಮುಂದೆ ಕಟ್ಟಿದ್ದ 20 ಸಾವಿರ ರೂ. ಮೌಲ್ಯದ 2 ಟಗರುಗಳನ್ನು ಯಾರೋ ಕಳ್ಳತನ ಮಾಡಿಕೊಂಡು ಹೋದ ಘಟನೆ ತಾಲೂಕಿನ ಅಳಲಗೇರಿಯಲ್ಲಿ ಬುಧವಾರ ನಡೆದಿದೆ.
ನಾಗರಾಜ ಉಡ್ಡಗಲ್ಲೇಪ್ಪ ಮಾಸ್ತಣ್ಣನವರ (35) ಎಂಬುವರ ಟಗರು ಕಳ್ಳತನ ಆಗಿರುವುದು.
ಇವರ ಜಮೀನಿನಲ್ಲಿರುವ ರೇಷ್ಮೆ ಸಾಕಾಣಿಕೆ ಮನೆ ಮುಂದೆ ಕಟ್ಟಿದ್ದ ಟಗರುಗಳನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net