ಟೇಕ್ವಾಂಡೋ ಕ್ರೀಡಾಕೂಟ: ರಾಷ್ಟ್ರ ಮಟ್ಟಕ್ಕೆ ಆಯ್ಕೆ

16 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರಥಮ ಬಾರಿಗೆ ಕರ್ನಾಟಕ ರಾಜ್ಯ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ ಕ್ರೀಡಾಕೂಟದಲ್ಲಿ ಸೇರ್ಪಡೆ ಮಾಡಿರುವ ಟೇಕ್ವಾಂಡೋ ಕ್ರೀಡಾಕೂಟದಲ್ಲಿ ಜಿಲ್ಲೆಯ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡುವ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಒಲಿಂಪಿಕ್​ ಅಸೋಸಿಯೇಶನ್​ ಅಧ್ಯಕ್ಷ ಶಿವು ಹಿರೇಮಠ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ, 12, 13ರಂದು ಚಿಕ್ಕಮಗಳೂರಿನಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಟೇಕ್ವಾಂಡೋ ಕ್ರೀಡಾಕೂಟದಲ್ಲಿ ಒಟ್ಟು 14 ವಿದ್ಯಾರ್ಥಿಗಳು ಪದಕ ಪಡೆದಿದ್ದಾರೆ. ಇದರಲ್ಲಿ ಚಿನ್ನದ ಪದಕ ಪಡೆದ 6 ಜನರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದರು.
ಬಾಲಕಿಯರ 14 ವರ್ಷ ವಯೋಮಿತಿಯಲ್ಲಿ ಹೊನ್ನಾಪುರ ಸರ್ಕಾರಿ ಶಾಲೆಯ ಲಕ್ಷ್ಮೀ ಬಂಬರಗಿ, ಮುಮ್ಮಿಗಟ್ಟಿಯ ಪಾಲಾಕ್ಷ ಪೋದ್ದಾರ ಲರ್ನ್ ಶಾಲೆಯ ಸಾಂಚಿ ಹುನಗುಂದ, ಅದಿತಿ ಕಂಬಳಿ, ಮಾರ್ನಿ೦ಗ್​ ಗ್ಲೋರಿ ಶಾಲೆಯ ಮಾಹೀನ ನವಲೂರ, ಬಾಲಕರ ವಿಭಾಗದಲ್ಲಿ ಬಾಲಬಳಗದ ಹರ್ಷ ಸುಳ್ಳಳ್ಳಿ, ಬಸವರಾಜ ಕಮ್ಮಾರ ಚಿನ್ನದ ಪಕದ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ನ. 6ರಿಂದ ಮಧ್ಯಪ್ರದೇಶದಲ್ಲಿ ನಡೆಯಲಿರುವ 68ನೇ ರಾಷ್ಟ್ರೀಯ ಶಾಲಾ ಟೇಕ್ವಾಂಡೋ ಕ್ರೀಡಾಕೂಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದರು.
ಉಳಿದಂತೆ ಬಾಲಕಿಯರ 17 ವರ್ಷ ವಯೋಮಿತಿಯಲ್ಲಿ ಸಿಂಚನಾ ಕಮತಗಿ, ಬಾಲಕರ 17ವರ್ಷ ವಯೋಮಿತಿಯಲ್ಲಿ ಶ್ರೀಶ ಆಚಾರ್ಯ, ಬಾಲಕಿಯರ 14 ವರ್ಷ ವಯೋಮಿತಿಯಲ್ಲಿ ಪವಿತ್ರಾ ಕಂಬಾರ, ಬಾಲಕರ 14 ವರ್ಷ ವಯೋಮಿತಿಯಲ್ಲಿ ಮಹೇಶ ಪರಸಣ್ಣವರ ಬೆಳ್ಳಿ ಪದಕ ಪಡೆದಿದ್ದಾರೆ. ಕಾವ್ಯಾ ಕಲಾಜ, ನೇಹಾ ಕಿತ್ತೂರ, ಸಂಚಿತಾ ಪೂಜಾರಿ, ದೀಪಾ ಕಂಬಾರ, ಸುನೀತಾ ಕೊಳಪಟ್ಟಿ, ಸಂಕೇತ ಭುಜಂಗನವರ, ಭಾಗ್ಯರಾಜ ಪ್ರತಾಪುರೆ ಕಂಚಿನ ಪದಕ ಪಡೆದಿದ್ದಾರೆ ಎಂದರು.
ಟೇಕ್ವಾಂಡೋ ಸಂಸ್ಥೆ ಅಧ್ಯಕ್ಷ ಬಿ.ಎಸ್​. ತಾಳಿಕೋಟಿ, ತರಬೇತುದಾರ ಪರಪ್ಪ ಎಸ್​.ಕೆ., ಕುಮಾರ​, ನಾಗರಾಜ ಗವಳಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net