

ಮಂಡ್ಯ: ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ 39ನೇ ಸಬ್ ಜೂನಿಯರ್, ಜೂನಿಯರ್, ಸೀನಿಯರ್ ಟೇಕ್ವಾಂಡೋ ಚಾಂಪಿಯನ್‌ಷಿಪ್‌ನಲ್ಲಿ ಜಿಲ್ಲೆಯ 9 ಮಕ್ಕಳು ಪದಕ ಗಳಿಸಿದ್ದಾರೆ.
ಜಿಲ್ಲೆಯಿಂದ ಒಟ್ಟು 20 ಕ್ರೀಡಾಪಟುಗಳು ಟೂರ್ನಿಯಲ್ಲಿ ಭಾಗವಹಿಸಿದ್ದರು. ಈ ಪೈಕಿ ಪಿ.ವಿಶ್ವಾಸ್(ಚಿನ್ನ), ಎಂ.ಋತ್ವಿಕ್ ಆದಿತ್ಯ, ಕೆ.ಐಶ್ವರ್ಯಾಲಕ್ಷ್ಮೀ, ಜಿ.ಎಂ.ವೇದಾಂತ್, ಪುಣ್ಯ ಪ್ರತೀಕ್(ಬೆಳ್ಳಿ), ಡಿ.ಎಸ್.ವಿರಾಟ್, ಎಂ.ಎಸ್.ಕೃತಿಕ್, ಎಂ.ಸುಜಿತ್‌ಕುಮಾರ್, ಎಂ.ಆರ್.ಯತೀಶ್(ಕಂಚು) ಬಹುಮಾನ ಪಡೆದಿದ್ದಾರೆ. ಅಂತೆಯೇ ಎಸ್.ಜಯಂತ್, ಎಂ.ಆರ್.ನಿಖಿಲ್ರಾಜ್, ಆರ್.ಬಿ.ಹರ್ಷ, ಎನ್.ಋಷಿಕೇಶ್, ಆರ್.ಗಗನಶ್ರೀ, ಎಂ.ಕೆ.ಮೋನಿಕಾ, ಎಂ.ಚರಣ್, ಬಿ.ಮಹದೇವಪ್ರಸಾದ್ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ.
ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಮಂಡ್ಯ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಅಭಿನಂದಿಸಲಾಯಿತು. ಇಲಾಖೆ ಸಹಾಯಕ ನಿರ್ದೇಶಕ ಜಿ.ಓಂಪ್ರಕಾಶ್, ಅಧೀಕ್ಷಕ ನಾಗಭೂಷಣ್, ಜಿಲ್ಲಾ ಟೇಕ್ವಾಂಡೋ ಅಸೋಸಿಯೇಷನ್ ಅಧ್ಯಕ್ಷ ಮುತ್ತೆಗೆರೆ ಮಂಜು, ಉಪಾಧ್ಯಕ್ಷ ಕುಬೇರ ನಾರಾಯಣ್, ದೈಹಿಕ ಶಿಕ್ಷಣ ಶಿಕ್ಷಕಿ ಆರ್.ಆಶಾಲತಾ, ಪತ್ರಕರ್ತ ನವೀನ್ ಚಿಕ್ಕಮಂಡ್ಯ ಅವರು ಅಭಿನಂದಿಸಿದರು. ಟೇಕ್ವಾಂಡೋ ತರಬೇತುದಾರ ಎಂ.ಯೋಗೇಶ್, ಹಿರಿಯ ಟೇಕ್ವಾಂಡೋ ಕ್ರೀಡಾಪಟು ಪಿ.ಯೋಗೇಶ್ವರ್ ಇತರರಿದ್ದರು.