

ಮಡಿಕೇರಿ: ಅಖಿಲ ಭಾರತ ಟೇಕ್ವಾಂಡೋ ಅಸೋಸಿಯೇಷನ್ ಆಶ್ರಯದಲ್ಲಿ ನಡೆದ ೨೭ನೇ ಎಐಟಿಎ ರಾಷ್ಟ್ರೀಯ ಐಟಿಎಫ್ ಟೇಕ್ವಾಂಡೋ ಚಾಂಪಿಯನ್‌ಶಿಪ್ ೨೦೨೪ ರಲ್ಲಿ ಭಾಗವಹಿಸಿ ಮೂರ್ನಾಡು ಸಮೀಪದ ಬಲಂಬೇರಿ ಗ್ರಾಮದ ಬೊಳ್ತಂಡ ಸಿ.ಜಸ್ಮಿತಾ ಚಿನ್ನ ಹಾಗೂ ಕಂಚಿನ ಪದಕ ಪಡೆದುಕೊಂಡಿದ್ದಾರೆ.
ಇತ್ತೀಚೆಗೆ ನವದೆಹಲಿಯ ರಾಜ್‌ಘಾಟ್‌ನ ಇಂದಿರಾ ಗಾಂಧಿ ಸ್ಫೋರ್ಟ್ಸ್ ಕಾಂಪ್ಲೆಕ್ಸ್ ಸ್ಟೇಡಿಯಂನಲ್ಲಿ ನಡೆದ ೧೪ರ ಒಳಗಿನ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಜಸ್ಮಿತಾ ಈ ಸಾಧನೆ ಮಾಡಿದ್ದಾರೆ. ಸ್ಪರಿಂಗ್ ವಿಭಾಗದಲ್ಲಿ ಪ್ರಥಮ ಹಾಗೂ ಸೆಲ್ಫ್‌ಡಿಫೆನ್ಸ್ ವಿಭಾಗದಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ.
ಬೊಳ್ತಂಡ ಸಿ.ಜಸ್ಮಿತಾ ಬೆಂಗಳೂರಿನಲ್ಲಿ ನೆಲೆಸಿದ್ದು, ಮೂಲತಃ ಬಲಂಬೇರಿ ಗ್ರಾಮದ ಬೊಳ್ತಂಡ ಚಂಗಪ್ಪ ಹಾಗೂ ನಮಿತಾ ದಂಪತಿ ಪುತ್ರಿಯಾಗಿದ್ದು, ಬೆಂಗಳೂರಿನ ಖಾಸಗಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿನಿಯಾಗಿದ್ದಾರೆ. ಕಳೆದ ಒಂದುವರೆ ವರ್ಷದಿಂದ ಗಂಗಾಧರ್ ಹಾಗೂ ಅನಿಲ್ ಎಂಬುವವರಿಂದ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.