ತಡಶೀಘಟ್ಟದಲ್ಲಿ ಬ್ರಹ್ಮ ರಥೋತ್ಸವ ಸಂಪನ್ನ, ರಥಕ್ಕೆ ಪ್ರದಕ್ಷಿಣೆ ಹಾಕಿದ ಗರುಡ ಪಕ್ಷಿ

photo tgl 2(9.3.2020) tadasighatta jatre
Published on

ತ್ಯಾಮಗೊಂಡ್ಲು: ಹೋಬಳಿಯ ಪ್ರಸಿದ್ಧ ತಡಶೀಘಟ್ಟದ ಶ್ರೀ ಲಕ್ಷ್ಮೀನರಸಿಂಹ ದೇವರ ಬ್ರಹ್ಮರಥೋತ್ಸವ ಸೋಮವಾರ ಸಂಭ್ರಮದಿಂದ ನೆರವೇರಿತು.

ಪ್ರತಿ ವರ್ಷದ ವಾಡಿಕೆಯಂತೆ ಬೆಳಗ್ಗೆಯಿಂದಲೂ ಅಲ್ಲೆಲ್ಲೂ ಕಾಣಿಸದ ಗರುಡ ಪಕ್ಷಿ ಸರಿಯಾಗಿ ಮಧ್ಯಾಹ್ನ 2ರ ಸಮಯದಲ್ಲಿ ರಥದ ಪ್ರದಕ್ಷಿಣೆ ಮಾಡಿತು. ಈ ಕೌತುಕದ ಘಟನೆಗೆ ಸಹಸ್ರಾರು ಭಕ್ತರು ಸಾಕ್ಷಿಯಾದರು. ತಕ್ಷಣ ಭಕ್ತರ ಜಯಘೋಷದೊಂದಿಗೆ ರಥೋತ್ಸವ ನೆರವೇರಿತು.

ತಡಸೀಘಟ್ಟದ ಕಂಬೇಗೌಡ, ಕೃಷ್ಣೇಗೌಡ ಕುಟುಂಬ, ಓಬಳಾಪುರದ ಕಟ್ಟೆಮನೆ ಕುಟುಂಬ, ಸಿಂಪಾಡಿಪುರದ ತಿಮ್ಮಯ್ಯ ಕುಟುಂಬ, ತ್ಯಾಮಗೊಂಡ್ಲುವಿನ ನಾಗಪ್ಪ ಶೆಟ್ಟರು ಹಾಗೂ ಶ್ಯಾನುಭೋಗ್ ಅಶ್ವತ್ಥ ನರಸಿಂಹಯ್ಯ ಅವರ ಮಕ್ಕಳು, ಬ್ರಾಹ್ಮಣ ಸಂಘದವರು, ದೊಡ್ಡಬೆಲೆ ಶ್ಯಾನುಭೋಗರ ವಂಶಸ್ಥರಾದ ವಿಶ್ವನಾಥ್ ಮತ್ತು ಸಹೋದರರು ವಂಶಪಾರಂಪರ‌್ಯವಾಗಿ ಈ ಬ್ರಹ್ಮರಥೋತ್ಸವದ ದಿನದ ಸೇವೆಯನ್ನು ನಡೆಸಿಕೊಟ್ಟರು.

ಬಿಸಿಲಿನ ಜಳವನ್ನು ಲೆಕ್ಕಿಸದೆ ಹೆಚ್ಚಿನ ಸಂಖ್ಯೆಯ ಭಕ್ತರು ರಥೋತ್ಸವದಲ್ಲಿ ಹಾಜರಿದ್ದರು. 20ಕ್ಕೂ ಹೆಚ್ಚು ವಿವಿಧ ಕುಟುಂಬದವರು ಅರವಂಟಿಗೆ ಸ್ಥಾಪಿಸಿ ಭಕ್ತರಿಗೆ ಪಾನಕ, ಮಜ್ಜಿಗೆ ಮತ್ತು ಕೋಸಂಬರಿ ಹಂಚಿದರು.ಅನೇಕರ ಮನೆಗಳಲ್ಲಿ ಆಹ್ವಾನಿತರಿಗೆ ಹಬ್ಬದೂಟದ ವ್ಯವಸ್ಥೆ ಏರ್ಪಡಿಸಲಾಗಿತ್ತು.

ಬೆಳಗಿನಿಂದಲೂ ಅರ್ಚಕ ರಾಜಗೋಪಾಲಾಚಾರ್ಯ, ಪದ್ಮನಾಭ ಮತ್ತು ಸಂಕರ್ಷಣ ಆಗಮಿಕರಾದ ಡಿ.ನಾರಾಯಣಭಟ್ಟರಿಂದ ಹೋಮ ಹವನ ನಡೆದವು.

ಅಹಿತಕರ ಘಟನೆ ನಡೆಯದಂತೆ ತ್ಯಾಮಗೊಂಡ್ಲು ಆರಕ್ಷಕ ನಿರೀಕ್ಷಕ ಪಿ.ಎಸ್.ಕೃಷ್ಣಕುಮಾರ್ ಪೊಲೀಸರ ಬಂದೋಬಸ್ತ್ ಏರ್ಪಡಿಸಿದ್ದರು.

ದೊಡ್ಡಬೆಲೆ ಗ್ರಾಪಂ ಅಧ್ಯಕ್ಷೆ ನಂಜಾಮಣಿ ಚಂದ್ರಪ್ಪ, ಜಿಪಂ ಸದಸ್ಯೆ ಪುಷ್ಪಾವತಿ ಪುರುಷೋತ್ತಮ್, ತಾಪಂ ಸದಸ್ಯೆ ಅನಿತಾ ತ್ಯಾಗರಾಜ್, ಸದಸ್ಯ ಮರಳಕುಂಟೆ ನಾಗಭೂಷಣ್, ದೊಡ್ಡಬೆಲೆ ಗ್ರಾಪಂ ಮಾಜಿ ಅಧ್ಯಕ್ಷ ಪುರುಷೋತ್ತಮ್, ಗ್ರಾಪಂ ಸದಸ್ಯ ದೊಡ್ಡಬೆಲೆ ಪುಟ್ಟಸ್ವಾಮಿ, ದೊಡ್ಡಬೆಲೆ ಚನ್ನಕೇಶವ, ತಹಸೀೀಲ್ದಾರ್ ಎನ್.ಶ್ರೀನಿವಾಸಯ್ಯ, ಉಪ ತಹಸೀಲ್ದಾರ್ ಎಚ್.ಎಸ್.ಪ್ರಕಾಶ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕಾರೇಹಳ್ಳಿ ಗುರುಪ್ರಕಾಶ್, ಕಳಲುಘಟ್ಟ ವಿಎಸ್‌ಎಸ್‌ಎನ್ ಅಧ್ಯಕ್ಷ ಇಸುವನಹಳ್ಳಿ ಭೋಜಣ್ಣ, ಮುಖಂಡರಾದ ತಡಶೀಘಟ್ಟ ಚಂದ್ರಣ್ಣ, ತಡಶೀಘಟ್ಟ ಮಂಜುನಾಥ್, ತಡಶೀಘಟ್ಟ ನರಸೇಗೌಡ, ದೊಡ್ಡಬೆಲೆ ನಟರಾಜ್, ಕೊಡಿಗೇಹಳ್ಳಿ ತ್ಯಾಗರಾಜ್, ಸಿ.ಅಶ್ವತ್ಥ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net