ತಡಸ ಶ್ರೀ ವೀರಭದ್ರೇಶ್ವರ ಗದ್ದುಗೆಯ ಗುಗ್ಗಳ, ರಥೋತ್ಸವ 5ರಂದು

veerbhadra
Published on

ತಡಸ (ಶಿಗ್ಗಾಂವ ತಾ.): ಗ್ರಾಮದ ಶ್ರೀ ವೀರಭದ್ರೇಶ್ವರ ದೇವರ ಗದ್ದುಗೆಯ ಗುಗ್ಗಳ, ರಥೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾ. 5ರಂದು ಜರುಗಲಿವೆ. 5ರಂದು ಬೆಳಗ್ಗೆ 6ಕ್ಕೆ ಶ್ರೀ ವೀರಭದ್ರೇಶ್ವರ ಗುಗ್ಗಳೋತ್ಸವ ವೀರ ಪುರವಂತರು, ಸಕಲ ವಾದ್ಯ ವೈಭವಗಳೊಂದಿಗೆ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಅನ್ನ ದಾಸೋಹ, 2 ಗಂಟೆಗೆ ತೊಟ್ಟಿಲೋತ್ಸವ, ಸಂಜೆ 4.30ಕ್ಕೆ ಜಾಂಜ್, ಕರಡಿ, ಡೊಳ್ಳು, ಶಹನಾಯಿ ಮೇಳ ಹಾಗೂ ಪುರವಂತರ ಸಕಲ ವಾದ್ಯಗಳೊಂದಿಗೆ ಮಹಾರಥೋತ್ಸವ ಜರುಗುವುದು. ಸಂಜೆ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 8 ಗಂಟೆಗೆ ಗೋಟಗೋಡಿಯ ಜಾನಪದ ವಿವಿಯ ಕಲಾ ತಂಡದಿಂದ ಜಾನಪದ ಕಾರ್ಯಕ್ರಮ ನಡೆಯಲಿದೆ. 6ರಂದು ಸಂಜೆ 4.30ಕ್ಕೆ ಕಡುಬಿನ ಕಾಳಗ ಜರುಗುವುದು. ಮಾ. 6ರಿಂದ 8ರವರೆಗೆ ಜಂಗಿ ನಿಕಾಲಿ ಬಯಲು ಕುಸ್ತಿ ಏರ್ಪಡಿಸಲಾಗಿದೆ ಎಂದು ಶ್ರೀ ವೀರಭದ್ರೇಶ್ವರ ದೇವರ ಗದ್ದುಗೆ ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net