ಟೇಬಲ್ ಟೆನ್ನಿಸ್ ಪಂದ್ಯಾವಳಿ ಫಲಿತಾಂಶ

14 Dwd 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಜಿಲ್ಲಾಡಳಿತ, ಶಹರ ಕ್ಷೇತ್ರ ಶಿಕ್ಷಣಾಽಕಾರಿ ಕಾರ್ಯಾಲಯ ಹಾಗೂ ಶಾಂತಿ ಸದನ ಪೌಢಶಾಲೆ ಸಹಯೋಗದಲ್ಲಿ ನಗರದ ಕಾಸ್ಮಸ್ ಕ್ಲಬ್‌ನಲ್ಲಿ ಇತ್ತೀಚೆಗೆ 14 ಮತ್ತು 17 ವರ್ಷದೊಳಗಿನ ಬಾಲಕ- ಬಾಲಕಿಯರ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಸ್ಪರ್ಧೆಗಳು ನಡೆದವು.

14 ವರ್ಷದೊಳಗಿನ ಬಾಲಕರ ಸ್ಪರ್ಧೆಯಲ್ಲಿ ಧಾರವಾಡದ ಶಾಂತಿ ಸದನ ಪ್ರೌಢಶಾಲೆ ಪ್ರಥಮ, ಹುಬ್ಬಳ್ಳಿ ನವನಗರದ ಡಾನ್ ಬಾಸ್ಕೋ ಆಂಗ್ಲ ಮಾಧ್ಯಮ ಪೌಢಶಾಲೆ ದ್ವಿತೀಯ ಸ್ಥಾನ ಪಡೆಯಿತು. 14 ವರ್ಷದೊಳಗಿನ ಬಾಲಕಿಯರ ಸ್ಪರ್ಧೆಯಲ್ಲಿ ಹುಬ್ಬಳ್ಳಿ ನವನಗರದ ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪ್ರಥಮ, ಹುಬ್ಬಳ್ಳಿಯ ವಿ.ಪಿ. ಪಿಳ್ಳೆ ಆಂಗ್ಲ ಮಾಧ್ಯಮ ಪ್ರೌಢಶಾಲೆ ದ್ವಿತೀಯ ಸ್ಥಾನ ಪಡೆದಿದೆ.

17 ವರ್ಷದೊಳಗಿನ ಬಾಲಕರ ಸ್ಪರ್ಧೆಯಲ್ಲಿ ಧಾರವಾಡ ಕೆ.ಇ. ಬೋರ್ಡ್ ಪ್ರೌಢಶಾಲೆ ಪ್ರಥಮ, ಹುಬ್ಬಳ್ಳಿಯ ಎಸ್.ಬಿ.ಐ ಆಂಗ್ಲ ಮಾಧ್ಯಮ ಪ್ರೌಢಶಾಲೆ ದ್ವಿತೀಯ, 17 ವರ್ಷದೊಳಗಿನ ಬಾಲಕಿಯರ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಎನ್.ಕೆ. ಟಕ್ಕರ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪ್ರಥಮ, ಹುಬ್ಬಳ್ಳಿ ನವನಗರದ ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ದ್ವಿತೀಯ ಸ್ಥಾನ ಪಡೆಯಿತು.

ಕಾಸ್ಮಸ್ ಕ್ಲಬ್ ಮೇಲ್ವಿಚಾರಕ ಎಸ್.ಜಿ. ಪುರದ್, ತಾ.ಪಂ. ನಿವೃತ್ತ ಇಒ ರುದ್ರಸ್ವಾಮಿ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಣಾಽಕಾರಿ ವಿಷ್ಣುನಾರಾಯಣ ಹೆಬ್ಬಾರ, ಇತರರು ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಶಾಂತಿ ಸದನ ಪೌಢಶಾಲೆಯ ಮುಖ್ಯಾಧ್ಯಾಪಕಿ ಸಿಸ್ಟರ್ ಫಿಲೋಮೆನಾ ಮೆನೆಜಸ್, ದೈಹಿಕ ಶಿಕ್ಷಣ ಪ್ರಭಾರ ಶಿಕ್ಷಣಾಧಿಕಾರಿ ರಾಮಣ್ಣ ಮಾಳಿ, ಶೇಖರಗೌಡ ಪಾಟೀಲ, ಫಾದರ್ ಮೇರ್ವಿನ್, ವೀರೇಶ ಕಲ್ಮಠ, ಸೈಮನ್ ಕ್ರಾಸ್ತಾ, ಇಮಾನುವೆಲ್ ಚಲ್ಲಾ, ಶರಣು ಗುತ್ತಲ, ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಪಟ್ಟಣದವರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net