ಟೇಬಲ್ ಟೆನಿಸ್ ಪಂದ್ಯಾವಳಿಗೆ ಮೈಸೂರು ವಿವಿ ತಂಡ ಆಯ್ಕೆ

table tennis women (2)
Published on


ಮೈಸೂರು: ತಮಿಳುನಾಡಿನ ಚೆನ್ನೈ ಎಎಂಇಟಿ ವಿಶ್ವವಿದ್ಯಾಲಯದಲ್ಲಿ ಜ. 6 ರಿಂದ 9 ರವರೆಗೆ ನಡೆಯಲಿರುವ 2021-22ನೇ ಸಾಲಿನ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಟೇಬಲ್ ಟೆನಿಸ್ ಪಂದ್ಯಾವಳಿಗೆ ಮೈಸೂರು ವಿವಿ ತಂಡವನ್ನು ಆಯ್ಕೆ ಮಾಡಲಾಗಿದೆ.


ವಿವಿಯ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಸ್ಪೋರ್ಟ್ಸ್ ಪೆವಿಲಿಯನ್ ಮೈದಾನದಲ್ಲಿ ಇತ್ತೀಚೆಗೆ ತಂಡದ ಆಯ್ಕೆ ಪ್ರಕ್ರಿಯೆ ನಡೆದಿದೆ.


ಜೆಎಸ್‌ಎಸ್ ಕಾಲೇಜಿನ ಬಿ.ಎಚ್.ಹರ್ಷಿತಾ ರಾವ್(ನಾಯಕಿ), ವೈಷ್ಣವಿ ಎಂ.ಕುಮಾರ್, ಆರ್‌ಐಇ ಕಾಲೇಜಿನ ಎ.ಪಿ.ತಾನ್ಯ, ಮಹಾಜನ ಕಾಲೇಜಿನ ಬಿ.ಕೆ.ತೇಜಸ್ವಿನಿ ತಂಡಕ್ಕೆ ಆಯ್ಕೆಯಾಗಿದ್ದಾರೆ.

ತರಬೇತುದಾರ ಎಸ್.ಮಂಜು , ವ್ಯವಸ್ಥಾಪಕ ಎ.ಜೆ.ರಾಮಸ್ವಾಮಿ ಜತೆ ತಮ್ಮ ತಂಡ ಚೆನ್ನೈಗೆ ಪ್ರಯಾಣ ಬೆಳೆಸಿದೆ ಎಂದು ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net